ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವ

ದಾವಣಗೆರೆ:

       ಪ್ರಾಥಮಿಕ ಶಾಲೆಯ ಹಂತದಿಂದ ಕಾಲೇಜಿನವರೆಗೂ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ (ಪರೀಕ್ಷಾಂಗ) ಕುಲಸಚಿವ ಡಾ.ಬಸವರಾಜ್ ಬಣಕಾರ್ ಹೇಳಿದರು.
ನಗರದ ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿಂದು 2018-19ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

        ಪ್ರಾಥಮಿಕ ಶಾಲೆಯ ಹಂತದಿಂದ ಕಾಲೇಜಿನ ಹಂತದವರೆಗೂ ನೀವೆಲ್ಲಾ ಉತ್ತಮ ಭವಿಷ್ಯ ಕಾಣಲು ನಿಮಗೆ ವಿದ್ಯೆ ಕಲಿಸಿದ ಶಿಕ್ಷಕರೇ ಪ್ರೇರಕ ಶಕ್ತಿಗಳಗಾಗಿದ್ದಾರೆ. ಯಾವುದೇ ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದೆ ನೀವು ಸಹ ಶಿಕ್ಷಕರಾದಾಗ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಿಮ್ಮ ಕೈಯಲ್ಲಿರುತ್ತದೆ ಎಂದು ತಿಳಿಸಿದರು.

         ಪ್ರಶಿಕ್ಷಣಾರ್ಥಿಗಳಿಗೆ ಪ್ರತಿದಿನ, ಪ್ರತಿಕ್ಲಾಸ್ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಂಡಲ್ಲಿ ಹೆಚ್ಚಾಗಿ ಸಂತೋಷಪಡುವರು ಪೋಷಕರ ಜೊತೆಗೆ ಶಿಕ್ಷಕರು. ತಮ್ಮ ವಿದ್ಯಾರ್ಥಿ ಉನ್ನತ ಉದ್ಯೋಗಗಳನ್ನು ಅಲಂಕರಿಸಿದಾಗ ಶಿಕ್ಷಕರು ಸಹ ಹೆಮ್ಮೆ ಪಡುತ್ತಾರೆ ಎಂದು ಹೇಳಿದರು.

         ಶಿಕ್ಷಣ ಕೇವಲ ಉದ್ಯೋಗ ಪಡೆಯಲಿಕ್ಕಲ್ಲ. ಜ್ಞಾನ ಸಂಪಾದಿಸಿದರೆ ಏನು ಬೇಕಾದರು ಸಾಧಿಸಬಹುದು. ಛಲವಿದ್ದರೆ ಗುರಿ ತಲುಪಲು ಸಾಧ್ಯ. ಆದ್ದರಿಂದ ಹೆಚ್ಚು ಜಾನ ಸಂಪಾದಿಸಿ ಅದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದು ಉನ್ನತ ಶಿಕ್ಷಣಕ್ಕೆ ಪ್ರೇರಣೆ ನೀಡಬೇಕು. ಅವಕಾಶಗಳು ಸದುಪಯೋಗ ಪಡಿಸಿಕೊಂಡು ಮುಂದೆ ನಡೆಯಿರಿ ಎಂದು ಕರೆ ನೀಡಿದರು.

        ನಿಮಗೆ ನೀವೇ ಪ್ರೇರಣೆಯಾಗಬೇಕು. ನಿಮ್ಮ ತಂದೆ-ತಾಯಿ ನಿರೀಕ್ಷೆಗೂ ಮೀರಿ ಬೆಳೆಯಬೇಕು. ಶಿಕ್ಷಕ ವೃತ್ತಿ ಬಗ್ಗೆ ನಿರ್ಲಕ್ಷ ಬೇಡ. ಜಾನವನ್ನು ಕೊಟ್ಟು ಭವಿಷ್ಯ ರೂಪಿಸುವ ಗುರುವಿನ ಸ್ಥಾನದಲ್ಲಿರುವ ಶಿಕ್ಷಕರಿಗೆ ಪ್ರಥಮ ಸ್ಥಾನ ನೀಡಲಾಗಿದೆ. ಅದನ್ನು ಕಾಪಾಡುವಂತೆ ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ನೂತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್.ಮಠಪತಿ, ಅಧ್ಯಕ್ಷ ಎನ್.ಪರಶುರಾಮನಗೌಡ, ಉಪನ್ಯಾಸಕರಾದ ಕೆ.ವಿ.ಸುರೇಶ್, ಕೆ.ಎಸ್.ದಿವಾಕರ್ ನಾಯ್ಕ್ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link