ಚಿತ್ರದುರ್ಗ:
ವಿದ್ಯಾವಿಕಾಸ ಶಾಲೆಯ ಪ್ಲೇಹೋಂ ಮಕ್ಕಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಕಾಗದ ಪತ್ರಗಳನ್ನು ಹಾಕಿಸುವ ಮೂಲಕ ಅಂಚೆ ಕಚೇರಿ ಪಾತ್ರದ ಕುರಿತು ಶಿಕ್ಷಕಿಯರು ಪುಟಾಣಿ ಮಕ್ಕಳಿಗೆ ಪರಿಚಯಿಸಿದರು.ಒಂದು ಊರಿಂದ ಮತ್ತೊಂದು ಊರಿಗೆ ಕಾಗದ ಪತ್ರಗಳನ್ನು ತಲುಪಿಸುವುದು. ಅದೆ ರೀತಿ ಬೇರೆ ಊರುಗಳಿಂದ ಇಲ್ಲಿಗೆ ಬರುವ ಪತ್ರಗಳನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವಲ್ಲಿ ಅಂಚೆ ಇಲಾಖೆ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿರುವುದನ್ನು ಮಕ್ಕಳಿಗೆ ತಿಳಿಸುವುದಕ್ಕಾಗಿ ಪ್ರತಿ ವರ್ಷವೂ ಅಂಚೆ ಕಚೇರಿ, ಬ್ಯಾಂಕ್‍ಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಚಿಕ್ಕಂದಿನಿಂದಲೇ ಪರಿಚಯಿಸುವುದು ಇದರ ಉದ್ದೇಶ ಎಂದು ವಿದ್ಯಾವಿಕಾಸ ಶಾಲೆಯ ಶಿಕ್ಷಕಿಯರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
