ತಿಪಟೂರು :
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಮಕ್ಕಳಿಗೆ ಪಠ್ಯೆತರ ಚಟುವಟಿಕೆಗಳಲ್ಲಿ ಅವಕಾಶ ಮಾಡಿಕೊಡುವುದರಿಂದ ಮಕ್ಕಳಿಗೆ ತಮ್ಮ ಪ್ರತಿಭೆ ತಿಳಿದುಕೊಳ್ಳಲು ಸಹಕಾರಿ ಎಂದು ತಿಪಟೂರಿನ ಷಡಕ್ಷರ ಮಠದ ಶ್ರೀ ಡಾ.ರುದ್ರಮುನಿ ಸ್ವಾಮಿಜಿ ತಿಳಿಸಿದರು
ನಗರದ ಕಂಚಾಘಟ್ಟದ ಷಡಕ್ಷರ ಮಠದಲ್ಲಿ ಗುರುವಾರ ನಡೆದ ದಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ತುಮಕೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,
ತುಮಕೂರು ವಿಜನ್ ಇಂಡಿಯಾ (ರಿ) ಹಾಗೂ ತಿಪಟೂರು ನವೋದಯ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್‍ನ ಸಾಂಕ್ಕತಿಕ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.ಮಕ್ಕಳು ವಿದ್ಯಾಭ್ಯಾಸದ ಜೋತೆಗೆ ಅನೇಕಾರು ಚಟುವಟಿಕೆಗಳಲ್ಲಿ ತೋಡಗಿಕೊಳ್ಳು ವುದರಿಂದ ಅವರ ಬೌದ್ದಿಕ ಮಟ್ಟ ಹೆಚ್ಚುವುದರಿಂದ ದೊಡ್ಡವರಾದ ಮೇಲೆ ಅವರ ಕನಸ್ಸಿನಂತೆ ಬದುಕಲು ತುಂಬಾ ಸಹಕಾರಿ ಹಾಗೂ ತಮ್ಮ ಅಮೂಲ್ಯವಾದ ಜೀವನ ಕಟ್ಟಿಕೊಳ್ಳಲು ತುಂಭಾ ಸಹಕಾರಿಯಾಗುತ್ತದೆ ಎಂದರು.
ಟ್ರಸ್ಟ್‍ನ ಕಾರ್ಯದರ್ಶಿ ಶೋಭಾವಿರೇಶ್ ಮಾತನಾಡಿ ಯಾವುದೇ ಸ್ಪರ್ದೆ ಇಲ್ಲದೆ ಮುಕ್ತವಾಗಿ ಮಕ್ಕಳು ಬಾಗವಹಿಸುವುದರಿಂದ ಎಲ್ಲರ ಪ್ರತಿಭೆಗಳನ್ನು ಗುರುತಿಸಬಹುದಾಗಿದೆ, ನಮ್ಮ ಟ್ರಸ್ಟ್ ಈ ನಿಟ್ಟಿನಲ್ಲಿ ಆನೇಕಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು ಎಲ್ಲರೂ ಭಾಗವಹಿಸಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರೇರಣಾ ನವೋದಯ ಶಾಲಾ ತರಬೇತಿ ಕೇಂದ್ರದ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ದ್ರಾಕ್ಷಾಯಿಣಿ, ಕೆ.ಅರ್.ಎಸ್.ಎಸ್, ಸಂಸ್ಥೆಯ ವಿಜ್‍ನ್ ಇಂಡಿಯಾ ನಿರ್ದೇಶಕರು, ಮತ್ತಿತರರ ಸದಸ್ಯರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








