ತುಮಕೂರು
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನಿಂದ ZOUL ಲೈಪ್ ಸ್ಟೈಲ್ ಆಭರಣಗಳ ಅನಾವರಣ – ಹೊಸ ಯುಗದ ಮಹಿಳೆಯರಿಗೆ ಹಗುರ ಆಭರಣ ಸಂಗ್ರಹ ಅನಾವರಣ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಚಿನ್ನ ಮತ್ತು ವಜ್ರದ ರೀಟೇಲ್ ಚೇನ್ ಆಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮುಂಬರುವ ಹಬ್ಬದ ಋತುವಿಗೆ ಮತ್ತಷ್ಟು ವೈಭವ ಮತ್ತು ಸಂಭ್ರಮವನ್ನು ತಂದುಕೊಡುವ ನಿಟ್ಟಿನಲ್ಲಿ ಹೊಸ ಯುಗದ ಮಹಿಳೆಯರಿಗಾಗಿ ZOUL ಎಂಬ ಲೈಫ್ ಸ್ಟೈಲ್ ಆಭರಣದ ಸಂಗ್ರಹವನ್ನು ಬಿಡುಗಡೆ ಮಾಡಿದೆ.
ಇದು ಸಮಕಾಲೀನ ಹಗುರವಾದ ಆಭರಣದ ಸಂಗ್ರಹವಾಗಿದ್ದು, ಎಲ್ಲರಿಗೂ ಮೆಚ್ಚುಗೆಯಾಗುವಂತಹದ್ದಾಗಿದೆ. 5,999 ರೂಪಾಯಿಗಳಿಂದ ಆರಂಭವಾಗುವ ಈ ZOUL ಲೈಫ್ ಸ್ಟೈಲ್ ಆಭರಣದಲ್ಲಿ ಉಂಗುರ, ನೆಕ್ಲೆಸ್, ಬಳೆ, ಪೆಂಡೆಂಟ್, ಮೂಗುನತ್ತು, ಸ್ಟಡ್ಸ್, ಬ್ರೇಸ್‍ಲೆಟ್ ಸೇರಿದಂತೆ ಇನ್ನಿತರೆ ಆಭರಣಗಳು ಸೇರಿವೆ.
18 ಕ್ಯಾರೆಟ್ ಪಿಂಕ್ ಮತ್ತು ರೋಸ್ ಹಾಲ್‍ಮಾರ್ಕ್ ಗೋಲ್ಡ್, ಡೈಮಂಡ್ ಹಾಗೂ ಸ್ವರೋಸ್ಕಿ ಸೆಮಿ- ಅಮೂಲ್ಯವಾದ ಸ್ಟೋನ್‍ಗಳನ್ನು ಒಳಗೊಂಡಿವೆ. ಈ ಸಂಗ್ರಹವು ಗ್ರಾಹಕರಿಗೆ ಒಪ್ಪುವ ರೀತಿಯಲ್ಲಿ ಟ್ರೆಂಡಿ ಮತ್ತು ಹಗುರವಾದ ವಿನ್ಯಾಸಗಳನ್ನು ಒಳಗೊಂಡಿದೆ. ದೈನಂದಿನ ಬಳಕೆಗೆ ಹೇಳಿ ಮಾಡಿಸಿದಂತಹ ಆಭರಣಗಳಾಗಿವೆ ಎಂದು ಕಂಪನಿ ತಿಳಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
