ಕೊರಟಗೆರೆ:
ಬರಗಾಲದ ಛಾಯೆಗೆ ಸತತ 10-15 ವರ್ಷಗಳಿಂದ ನಲುಗಿರುವ ಕೊರಟಗೆರೆ ತಾಲ್ಲೂಕಿನ ರೈತ, ಮುಂಗಾರು ಹಂಗಾಮಿನ ವಾಡಿಕೆ ಮಳೆಗೆ ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯಕ್ಕೆ ಮಳೆ ಎದುರು ನೋಡುತಿರುವುದು ಒಂದೆಡೆಯಾದರೆ, ಪ್ರತಿ ವರ್ಷದಂತೆ ಈ ಬಾರಿಯು ಮಳೆ ಕೈಕೊಟ್ಟು ಬರಗಾಲ ಅವರಿಸಿದರೆ ಗತಿಯೇನು ಎಂಬ ಅತಂಕದಲ್ಲಿ ರೈತ ಮುಗಿಲು ನೋಡುತಿರುವ ವತಾವರಣ ನಿರ್ಮಾಣವಾಗಿದೆ.
ಕೊರಟಗೆರೆ ತಾಲ್ಲೂಕು ನಂಜುಂಡಪ್ಪ ವರದಿ ಅನ್ವಯ ಬರ ಪೀಡಿತ ತಾಲ್ಲೂಕೆಂದು ಸತತ 5-6 ವರ್ಷಗಳಿಂದ ಘೋಷಣೆಯಾಗುತ್ತಿದ್ದು .ಹಿಂದಿನ ವರ್ಷಕ್ಕಿಂತ ಈ ವರ್ಷ ವಾಡಿಕೆ ಮಳೆ ಉತ್ತಮವಾಗಿದ್ದರೂ ಹೇಳಿಕೊಳ್ಳುವಷ್ಟು ಮಟ್ಟಕ್ಕೆ ಮಳೆಯಾಗದೆ, ಕೆರೆಕುಂಟೆಗಳಲ್ಲಿ ನೀರುಗಳಿಲ್ಲದೆ ಕೃಷಿ ಚಾಟುವಟಿಕೆಗಳು ಹಿಂದುಳಿದಿದ್ದು ಮಳೆ ಇಲ್ಲಾದೆ ಅಂರ್ತಜಾಲ ಮಟ್ಟ ಕುಸಿದಿದ್ದು.ಕೊಳವೆ ಬಾವಿಗಳಲ್ಲೂ ನೀರಿಲ್ಲದೆ ತೋಟಗಾರಿಕೆ ಬೆಳೆಗಳಾದ ತೆಂಗು-ಅಡಿಕೆ-ಬಾಳೆ ಹೊಣಗಿರೈತ ಸಂಕಷ್ಟ ಅನುಭವಿಸುವ ಸಂದರ್ಭದಲ್ಲಿಮಳೆನಂಬಿ ಬಿತ್ತನೆ ನಡೆಸುವುದಕ್ಕೂ ರೈತ ಹಿಂದೂ ಮುಂದು ನೋಡುವ ಪರಿಸ್ಥಿತಿ ತಾಲ್ಲೂಕಿನ ಸಮಾನ್ಯವಾಗಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ 251 ಜನವಸತಿ ಗ್ರಾಮಗಳಿದ್ದು,ಇದರಲ್ಲಿ ಓಟ್ಟು ತಾಲ್ಲೂಕಿನ ವಿಸ್ತೀರ್ಣ 652 ಚ.ಕಿ.ಮೀ ಇದರೆ 61761 ಹೆಕ್ಟರ್ ಬೌಗೋಳಿಕ ವಿಸ್ತೀರ್ಣವಿದ್ದು, ಇದರಲ್ಲಿ ಓಟ್ಟು ಅರಣ್ಯ ಪ್ರದೇಶ 3476 ಹೆಕ್ಟರ್ ಆದರೆ ಉಳಿಕೆ 34723 ಸಾಗುವಳಿ ಭೂಮಿ, ಇದರಲ್ಲಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಬಿತ್ತನೆಯಾಗುವ ಪ್ರದೇಶ 2015 ಹೆಕ್ಟರ್, ಖುಷ್ಕಿ ಭೂಮಿ (ಮಳೆ ಅದಾರಿತ) 26923 ಹೆಕ್ಟರ್, ಉಳಿಕೆ 7800 ಹೆಕ್ಟರ್ ನೀರಾವರಿ ಪ್ರದೇಶವಿದ್ದು.ಮಳೆ ಅಧರಿತ ಭೂಮಿ ಹೆಚ್ಚಗಿರುವುದರಿಂದ ರೈತ ಮುಂಗಾರು ಮಳೆಗಾಗಿ ಭೂಮಿ ಹದ ಮಾಡಿಕೊಂಡು ಬಿತ್ತನೆ ಕಾರ್ಯಕ್ಕಾಗಿ ಎದುರು ನೋಡುತಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಕಂಡುಬರುತ್ತಿದೆ.
ಸಮಾನ್ಯವಾಗಿ ಪೂರ್ವಿಕರಿಂದಲ್ಲೂ ಮೃಗಶಿರ ಪ್ರಾರಂಭಗೊಂಡು ಅರಿದ್ರಾ ಮತ್ತು ಪುರ್ನವಸುಮಳೆ ಹೆಚ್ಚು ಬಂದರೆ ರೈತ ಸಂತೃಷ್ಟನಾಗುತ್ತಾನೆ ಅಂದರೆ ಭೂಮಿ ಹದ ಮಾಡಿಕೊಳುತ್ತಾನೆ ನಂತರ ಈ ಮಾಹೆಯಲ್ಲಿ ಪುರ್ನವಸು ಮತ್ತು ಪುಷ್ಯ ಮಳೆ ಸಂತೃಷ್ಠಿಯಾಗಿ ಸುರಿದರೆ ಬಿತ್ತನೆಕಾರ್ಯ ಬಹುತೇಕ ಅಂತ್ಯಗೊಳುತ್ತದೆ, ಅಂದರೆ ಜೂನ್ 25ರ ನಂತರ ಬಿತ್ತನೆ ಪ್ರರಂಭಗೊಂಡು ಜುಲೈ ಅಂತ್ಯದೊಳಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುವುದು ವಾಡಿಕೆ,ಅದೇ ಮಾದರಿಯಲ್ಲಿ ಈ ಬಾರಿಯೂ ಜೂನ್ ಮಾಹೆ ಪುರ್ನವರ್ತಿಸುವ ಮಳೆ ಸದಾರಣವಾಗಿ ವಾಡಿಕೆ ಮಳೆ ಪ್ರಮಾಣ ಬಹುತೇಕ 95% ನಷ್ಟು ಗುರಿ ಮುಟ್ಟಿದು , ರೈತ ಬೂಮಿ ಹದ ಮಾಡಿಕೊಂಡು ಬಿತ್ತಾನೆ ಕಾರ್ಯಕ್ಕೆ ಪುಷ್ಯ ಮಳೆಯನ್ನ ಎದುರು ನೋಡುತಿರುವುದು ಸಮಾನ್ಯವಾಗಿದೆ.
ಕೊರಟಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆಯ ಪ್ರಮಾಣ ಬಹುತೇಕ 95% ಭಾಗದಷ್ಟು ಮಳೆಯಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ಬರ ಅಧ್ಯಯನ ಕೇಂದ್ರ ಬೆಂಗಳೂರಿನ ವರದಿ ಪ್ರಕಾರ ಕೊರಟಗೆರೆ ತಾಲ್ಲೂಕಿನ 4 ಹೋಬಳಿ ಅಂದರೆ ಕೊರಟಗೆರೆಯಲ್ಲಿ 245ಮಿಮೀ ಮಳೆಗೆ 234ಮಿಮೀ ವಾಡಿಕೆ ಮಳೆಯಾಗಿದ್ದು, ಉಳಿಕೆ ಕೇವಲ 5% ಬಾಕಿ ಇದೆ, ಉಳಿದಂತೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 240ಮಿಮೀ ಮಳೆಗೆ 220 ಮಿಮೀವಾಡಿಕೆ ಮಳೆಯಾಗಿದ್ದು, ಉಳಿಕೆ ಕೇವಲ 7% ಮಾತ್ರಬಾಕಿ ಇದೆ, ಸಿ.ಎನ್.ದುರ್ಗ 253ಮಿಮೀ ಮಳೆಗೆ 204ಮಿಮೀ ವಾಡಿಕೆ ಮಳೆಯಾಗಿದ್ದು,ಉಳಿಕೆ ಕೇವಲ 19%ಬಾಕಿ ಇದೆ, ಹೊಳವನಹಳ್ಳಿ 239ಮಿಮೀ ಮಳೆಗೆ 226ವಾಡಿಕೆ ಮಳೆಯಾಗಿದ್ದು, ಉಳಿಕೆ ಕೇವಲ 5%ಬಾಕಿ ಇದೆ, ಕೋಳಾಲ 244ಮಿಮೀ ಮಳೆಗೆ 284ಮಿಮೀ ಇಲ್ಲಿಎಲ್ಲ ಹೋಬಳಿಗಿಂತ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದ್ದು, ಪ್ರಸಕ್ತ ಮಳೆಯಿಂದ ಹರ್ಷಗೊಂಡಿರುವ ರೈತ ಬರದ ನಡುವೆಯೂ ಒಂದಷ್ಟು ಭೂಮಿಯನ್ನು ಹದಮಾಡಿಕೊಳ್ಳುತಿದ್ದು, ಬಿತ್ತನೆ ಕಾರ್ಯಕ್ಕೆ ಮಳೆ ಕಾಯುತಿಯುವುದು ಸಮಾನ್ಯವಾದಿದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆ 34710 ಹೆಕ್ಟರ್ ಭೂಮಿಯಲ್ಲಿ ಬಿತ್ತನೆ ಕಾರ್ಯಕೈಗೊಳುವ ಗುರಿ ಹೊದಿದ್ದು, ಪ್ರಸಕ್ತವಾಗಿ ಜುಲೈ 15ರವರೆಗೆ 1240 ಹೆಕ್ಟರ್ ಬಿತ್ತನೆ ಕಾರ್ಯ ಜರುಗಿದ್ದು, 34710 ಹೆಕ್ಟರ್ ಭೂಮಿಗೆ ಬಿತ್ತನೆಗೆ ಬೇಕಾಗುವ ಎಲ್ಲಾ ಬಿತ್ತನೆ ಬೀಜ ರಸಗೊಬ್ಬರಗಳನ್ನು ದಾಸ್ತನು ಜೋತೆಗೆ ಮಾರಟ ಪ್ರಕ್ರಿಯೆಗೆ ತಾಲ್ಲೂಕ್ ಕೃಷಿ ಇಲಾಖೆ ಸಜ್ಜಾಗಿದ್ದು, ಈ ಬಾರಿ ಈವರೆಗೂ ಶೇ. 50% ನಷ್ಟು ಮಾತ್ರ ರೈತರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪಡೆದುಕೊಂಡಿದ್ದು, ಮಳೆ ಬರುವಿಕೆಗಾಗಿ ಕಾಯುತಿರುವುದು ಸಮಾನ್ಯವಾಗಿದೆ,ಜೋತೆಗೆ ಸತತ ಬರಗಾಲ ಸಂಕಷ್ಟದಲ್ಲಿರುವ ರೈತ ಬಿತ್ತನೆ ಕಾರ್ಯದಲ್ಲಿ ಸ್ವಲ್ಪ ನಿರುತ್ಸಹ ತಾಳುತಿದ್ದು, ಮುಂದಿನ ದಿನಗಳಲ್ಲಿ ಯಾವ ಪ್ರಮಾಣದಲ್ಲಿ ಮಳೆ ಆಗುತ್ತದೆಯ್ಯೊ ಆದರ ಆದರದ ಮೇಲೆ ಬಿತ್ತನೆ ಕಾರ್ಯ ಜರುಗುವುದು ಸಮಾನ್ಯವಾಗಿದೆ.