ಮಳೆಗಾಳಿಗೆ ಶೆಡ್ ಕುಸಿದು ಒಂದು ಸಾವು

ಹುಳಿಯಾರು:

    ಸಮೀಪದ ಹಂದನಕೆರೆಯಲ್ಲಿ ಕೆಂಗ್ಲಾಪುರದ ರಸ್ತೆಯಲ್ಲಿ ಭಾನುವಾರ ಸಂಜೆ ಬಂದ ಮಳೆಗಾಳಿಗೆ ಆಶ್ರಯ ಪಡೆಯಲು ರೇಷ್ಮೆ ಶೆಡ್ಡಿನ ಕೆಳಗೆ ನಿಂತಿದ್ದ ಗಂಗಮ್ಮ ಕೋಂ ಬೀರಯ್ಯ(೭೫) ಎಂಬಾಕೆಯ ಮೇಲೆ ಶೆಡ್ ಕುಸಿದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

     ಗಂಗಮ್ಮ ಎಂಬವರು ಹೊಲದ ಹತ್ತಿರ ದನಗಳನ್ನು ಮೇಯಿಸುತ್ತಿದ್ದಾಗ ಮಳೆ ಗಾಳಿ ಶುರುವಾದ್ದರಿಂದ ಪಕ್ಕದಲ್ಲಿದ್ದ ಮಲ್ಲೇಶಯ್ಯ ಅವರ ಹೊಲದಲ್ಲಿನ ರೇಷ್ಮೆ ಶೆಡ್ ಒಳೆಗೆ ಹೋಗಿ ನಿಂತಿದ್ದಾಗ ದುರ್ಘಟನೆ ಸಂಭವಿಸಿದೆ. ಅದೇ ಸಮಯದಲ್ಲಿಯೇ ಪಕ್ಕದ ಜಮೀನಿನ ರೇವಣ್ಣ ಬಿನ್ ಸಿದ್ದಪ್ಪ ಎಂಬುವರು ಸಹ ಶೆಡ್ ಒಳಗೆ ಇದ್ದು ಅವರಿಗೂ ಸಹ ಕೈಗೆ ಗಾಯಗಳಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ