ಮಳೆಗಾಳಿಯ ಆರ್ಭಟಕ್ಕೆ ಬಿದಿಗೆ ಬಂದ ಬಡ ಕುಟುಂಬ ..!!

ಹರಪನಹಳ್ಳಿ,

      ಮಳೆ, ಗಾಳಿಗೆ ಅನೇಕ ಮನೆಗಳು ಜಖಂಗೊಂಡು, ಬಾಲಕಿ ಸಾವನ್ನಪ್ಪಿ, 7-8 ಜನ ಗಾಯಗೊಂಡ ಘಟನೆ ತಾಲೂಕಿನಲ್ಲಿ ಗುರುವಾರ ಮದ್ಯ ರಾತ್ರಿ ಜರುಗಿದೆ.

      ತೊಗರಿಕಟ್ಟೆ ಗ್ರಾಮದಲ್ಲಿ 8 ಮನೆಗಳು, ಅಡವಿಹಳ್ಳಿಯಲ್ಲಿ 3, ಮನೆಗಳು, ಮುತ್ತಿಗಿ ಗ್ರಾಮದಲ್ಲಿ 3, ಸಾಸ್ವಿಹಳ್ಳಿಯಲ್ಲಿ 3, ಬಾವಿಹಳ್ಳಿ ಯಲ್ಲಿ 3, ಕೆ.ಕಲ್ಲಹಳ್ಳಿಯಲ್ಲಿ 3, ನೀಲಗುಂದದಲ್ಲಿ 3, ಬಾಗಳಿಯಲ್ಲಿ 2, ಕಂಚಿಕೇರಿ, ಹಲುವಾಗಲು, ಯರಬಾಳು, ಸೇರಿದಂತೆ ಅನೇಕ ಹಳ್ಳಿಗಳಲ್ಲಿ ನೂರಾರು ಮನೆಗಳು ಜಖಂಗೊಂಡಿವೆ.

      ಹರಪನಹಳ್ಳಿ ಪಟ್ಟಣದ ಗುಂಡಿನಕೇರಿಯಲ್ಲಿ ದಾದಾಪೀರ ಎಂಬುವವರ ಮನೆ ಕುಸಿದು 9 ವರ್ಷದ ಬಾಲಕಿ ಸಹರಾ ಸಾವನ್ನಪ್ಪಿದ್ದಾಳೆ ಹಾಗೂ ಸಿಮ್ರಾನ್ ಎಂಬ 7 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.

      ಪಟ್ಟಣದ ಚಿತ್ತಾರಗೇರಿಯಲ್ಲಿ ಸಿಕಂದರ ಎಂಬಾತನ ಮನೆಗೆ ಹಾನಿಯಾಗಿದೆ. ಹಾರಕನಾಳು ದೊಡ್ಡ ತಾಂಡದಲ್ಲಿ ದುಂಡಾನಾಯ್ಕ ಎಂಬುವಪರ ಮನೆಯ ಮೇಲ್ಚಾವಣೆ ಹಾರಿ ಮನೆಗೆ ಹಾನಿಯಾಗಿದ್ದರೆ, ಅಲ್ಲಿಯೇ ಶೇಖರನಾಯ್ಕ ಎಂಬಾತನ ಅಂಗಡಿ ಮೇಲ್ಚಾವಣೆ ಕುಸಿದು ಟಿ.ವಿ., ಪ್ರಿಜ್ ಸೇರಿದಂತೆ ಅಂಗಡಿ ಸಾಮಾನುಗಳು ಸಂಪೂರ್ಣ ನಾಶವಾಗಿವೆ.

       ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ನಿರ್ಮಾಣ ಕ್ಕಾಗಿ ತಮಿಳು ನಾಡು ನಿಂದ ಆಗಮಿಸಿ, ಇಲ್ಲಿಯ ಬಸ್ ಡಿಪೋದ ಬಳಿ ವಾಸವಿದ್ದ 7-8 ಜನರಿಗೆ ಮನೆ ಬಿದ್ದು ಗಾಯಗೊಂಡಿದ್ದಾರೆ. ಪಟ್ಟಣದ ದೇವರತಿಮಲಾಪುರ ಬಳಿ ಇರುವ ಪೃಥ್ಪಿರಂಗಶಾಲೆಯಲ್ಲಿ ಮರುಗಳು ಬಿದ್ದು ಸಾಕಷ್ಟು ಹಾನಿಗೀಡಾಗಿದೆ, ದಾಖಲಾತಿಗಳು ನಾಶಗೊಂಡಿವೆ ಎಂದು ರಂಗಶಾಲೆಯ ಪ್ರಾಚಾರ್ಯ ಬಿ.ಪರಶುರಾಮ ತಿಳಿಸಿದ್ದಾರೆ.

     ಅಲಗಿಲವಾಡದ ಮಂಜಪ್ಪ ಎಂಬುವರ 4 ಎಕರೆ ಬಾಳೆ ತೋಟ ಬಹಳಷ್ಟು ಹಾನಿಗೀಡಾಗಿದೆ, ತೊಗರಿಕಟ್ಟೆ ಗ್ರಾಮದಲ್ಲಿ ಅಂದಾಜು 8 ಎಕರೆ ದಾಳಿಂಬೆ ಹಾನಿಗೀಡಾಗಿದೆ ಹೊಂಬಳ ಗಟ್ಟಿ ಗ್ರಾಮದಲ್ಲಿ ಬೆನ್ನೂರು ಹನೀಫ್ ಸಾಹೇಬ್ ಎಂಬುವರ ಮನೆ ಸಂಪೂರ್ಣ ನೆಲ ಕಚ್ಚಿದ್ದು, ಅವರ ಕುಟುಂಬ ಬೀದಿಗೆ ಬಿದ್ದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap