ತುರುವೇಕೆರೆ:
ಬಿಸುಲಿನ ಬೇಸಿಗೆಯಿಂದ ಬಸವಳಿದಿದ್ದ ತಾಲೂಕಿನ ಜನತೆಗೆ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಸ್ವಲ್ಪ ತಂಪಾಗಿಸಿ ತಾಲೂಕಿನ ಅನೇಖ ಕಡೆಗಳಲ್ಲಿ ಅಪಾರ ನಷ್ಟ ಸಂಬವಿಸಿದೆ.
ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಾರಂಬವಾದ ಮಳೆಯಲ್ಲಿ ಹೆಚ್ಚು ಬಿರುಗಾಳಿಯಿಂದಾಗಿ ಆನೇಕ ಕಡೆಗಳಲ್ಲಿ ವಿದ್ಯುತ್ ಕಂಬ. ಮರಗಳು ದರೆಗುಳಿದಿವೆ. ತಾಲೂಕಿನ ಸೊರವನಹಳ್ಳಿಯಲ್ಲಿ ಕೆಲವು ಮರಗಳು ಮನೆಯ ಮೇಲೆ ಬಿದ್ದು ಮನೆಗಳು ಹಾನಿಯಾಗಿದೆ. ಟಿ.ಬಿಕ್ರಾಸ್ ನಿಂದ ತುಮಕೂರು ಮಾರ್ಗದ ರಸ್ತೆಯ ಪಕ್ಕದಲ್ಲಿದ್ದ ಬೃಹತ್ತು ಮರಗಳು ರಸ್ತೆಯಲ್ಲಿ ಬಿದ್ದು ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳು ಸೇರಿ ತುಂಡಾಗಿವೆ ಬೆಸ್ಕಾಂ ಇಲಾಖೆ ಅಪಾರ ನಷ್ಟ ಸಂಬವಿಸಿದೆ.
ದಂಡಿನಶಿವರ, ಕಸಭಾ, ಮಾಯಸಚಿದ್ರ ಹೋಬಳಿಗಳಲ್ಲಿ ನೂರಾರು ತೆಂಗು, ಅಡಿಕೆಮರಗಳು ಮುರಿದು ಬಿದ್ದಿವೆ. ಮಳೆಯ ಗಾಳಿಗೆ ರಭಸಕ್ಕೆ ಸಾವಿರಾರು ಬಾಳೆ ಗಿಡಗಳು ಸಂಪೂರ್ಣ ನಾಶವಾಗಿದ್ದು ರೈತರಿಗೆ ಸಾವಿರಾರು ರೂಗಳ ಅಪಾರ ನಷ್ಟ ಸಂಬವಿಸಿದೆ. ತಾಲೂಕಿನ ಗುಡ್ಡದಯ್ಯಪಾಳ್ಯದಲ್ಲಿ ಬೃಹತ್ ಅರಳಿಮರದ ಕೊಂಬೆಯೊಂದು ಮನೆಗಳ ಮೇಲೆ ಬಿದ್ದ ಪರಿಣಾಮ ರೇವಣ ಎಂಬುವರ ಮನೆ ಸಂಪೂರ್ಣ ಹಾನಿಯಾಗಿದೆ. ಅದೇ ರೀತಿ ಮರುಳಯ್ಯನ ಮನೆ ಕೂಡ ಹಾನಿಯಾಗಿದ್ದು ನಷ್ಟ ಸಂಬವಿಸಿದೆ. ಬೆಸ್ಕಾಂ ಇಲಾಖೆ ಸತತ ಪ್ರಯತ್ನ ಮಾಡಿ ಮುರಿದ ವಿದ್ಯುತ್ ಕಂಬಗಳನ್ನು ಸರಿಪಡಿಸಿ ವಿದ್ಯುತ್ ಸರಭರಾಜು ಮಾಡಿದ್ದಾರೆ.
.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ