ಬೆಂಗಳೂರು
ಮೈಸೂರಿನಿಂದ ಯಶವಂತಪುರಕ್ಕೆ ಬರುತ್ತಿದ್ದ ಸೂಪರ್ಫಾಸ್ಟ್ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು ಬಿನ್ನಿಮಿಲ್ ಸಮೀಪ ಗುರುವಾರ ಬೆಳಿಗ್ಗೆ ಎರಡು ಬಾರಿ ಹಳಿ ತಪ್ಪಿತ್ತಾದರೂ ಅದೃಷ್ಟವಶಾತ್ ಯಾವ ಪ್ರಯಾಣಿಕರಿಗೂ ಯಾವುದೇ ಆಪಾಯ ಸಂಭವಿಸಿಲ್ಲ.
ಯಶವಂತಪುರಕ್ಕೆ ಬರುತ್ತಿದ್ದ ಸೂಪರ್ಫಾಸ್ಟ್ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು ಬೆಳಿಗ್ಗೆ 11.15ರ ವೇಳೆ ಬಿನ್ನಿಮಿಲ್ ಸಮೀಪ ಇಂಜಿನ್ ಹಳಿ ತಪ್ಪಿದ್ದು ಕೂಡಲೇ ಚಾಲಕ ರೈಲು ನಿಲ್ಲಿಸಿದ್ದಾರೆ ರೈಲಿನ ವೇಗ ಕಡಿಮೆ ಇರುವುದು ಚಾಲಕನ ಸಮಯಪ್ರಜ್ಞೆಯಿಂದ ಯಾವ ಪ್ರಯಾಣಿಕರಿಗೂ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ.ಇಂಜಿನ್ನನ್ನು ದುರಸ್ತಿಗೊಳಿಸಿ ಮತ್ತೆ ರೈಲು ಹೊರm ಕೆಲವೇ ನಿಮಿಷಗಳಲ್ಲಿ 15 ಹಾಗೂ 16ನೇ ಸಂಖ್ಯೆಯ ಬೋಗಿ ಹಳಿತಪ್ಪಿದ್ದು ಕೂಡಲೇ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ತಾಂತ್ರಿಕ ತೊಂದರೆಯಿಂದ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.ಸ್ಥಳಕ್ಕೆ ನೈರುತ್ಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ