ಯೋಗ ಸ್ಪೋಟ್ರ್ಸ್ ಕಪ್ ಸ್ಪರ್ಧೆಗೆ ಮಲ್ಲಿಕಾರ್ಜುನ್ ಎನ್ ಮಳಗಿ ಆಯ್ಕೆ

ದಾವಣಗೆರೆ:

        ಇಲ್ಲಿನ ಪಿ.ಜೆ.ಬಡಾವಣೆಯ ಜೈನ್ ವಿದ್ಯಾಲಯದ 4ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ ಎನ್. ಮಳಗಿ ಮಾ.28ರಿಂದ 30ರ ವರೆಗೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯುವ “3ನೇ ಫೆಡರೇಷನ್ ಯೋಗ ಸ್ಪೋಟ್ಸ್‍ಕಪ್’ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾನೆ.

      ಈತ ವನಿತಾ ಯೋಗ ಕೇಂದ್ರದಲ್ಲಿ 1ನೇ ತರಗತಿಯಿಂದ ಯೋಗಾಭ್ಯಾಸ ಮಾಡುತ್ತಿದ್ದು, ಇಲ್ಲಿಯ ವರೆಗೂ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪಾರಿತೋಷಕಗಳನ್ನು ಪಡೆದಿದ್ದಾನೆ.ಈ ವಿದ್ಯಾರ್ಥಿಗೆ ಜೈನ್ ವಿದ್ಯಾಲಯದ ಕಾರ್ಯದರ್ಶಿ ರಮೇಶ್‍ಕುಮಾರ್‍ಜೆ., ಮುಖ್ಯ ಆಡಳಿತಾಧಿಕಾರಿ, ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link