ಕಸದ ರಾಶಿಗೆ ಬೆಂಕಿಯಿಟ್ಟು ದಂಡ ತೆತ್ತ ಆಸಾಮಿ

ತುಮಕೂರು

   ಕಸದ ರಾಶಿಯೊಂದಕ್ಕೆ ಬೆಂಕಿಯಿಟ್ಟ ವ್ಯಕ್ತಿಯೊಬ್ಬ ಪಾಲಿಕೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದು ದಂಡವನ್ನು ತೆತ್ತ ಅಪರೂಪದ ಪ್ರಸಂಗ ತುಮಕೂರಿನಲ್ಲಿ ನಡೆದಿದೆ.ತುಮಕೂರು ನಗರದ ಸಿದ್ಧರಾಮೇಶ್ವರ ಬಡಾವಣೆಯಲ್ಲಿ ಬಸವ ಭವನದ ಸಮೀಪ ಅಂಗಡಿಯೊಂದರ ಬಳಿ ಶನಿವಾರ ಬೆಳಗ್ಗೆ ಸುಮಾರು 10-30 ರಲ್ಲಿ ಈ ಪ್ರಸಂಗ ಜರುಗಿದೆ.

    ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಅವರು ಇದೇ ರಸ್ತೆಯಲ್ಲಿ ಆಗಮಿಸುವಾಗ ಆಕಸ್ಮಿಕವಾಗಿ ವ್ಯಕ್ತಿಯೊಬ್ಬ ಕಸವನ್ನು ಒಯ್ಯುತ್ತಿದ್ದುದನ್ನು ಗಮನಿಸಿದರು. ಬಳಿಕ ಆ ವ್ಯಕ್ತಿಯು ಕಸವನ್ನು ಒಂದೆಡೆ ಗುಡ್ಡೆ ಹಾಕಿ ಬೆಂಕಿ ಹಚ್ಚಿದ್ದನ್ನೂ ನೋಡಿದರು. ಆಗ ತಕ್ಷಣವೇ ನಾಗೇಶ್ ಕುಮಾರ್ ಅವರು ಸದರಿ ವ್ಯಕ್ತಿಯ ಬಳಿ ಬಂದು ಕಸವನ್ನು ರಸ್ತೆ ಬದಿ ಹಾಕಿದ ಹಾಗೂ ಅದಕ್ಕೆ ಬೆಂಕಿ ಹಚ್ಚಿದ ತಪ್ಪಿಗಾಗಿ ಸ್ಥಳದಲ್ಲೇ 1000 ರೂ. ದಂಡವನ್ನು ವಿಧಿಸಿದರು. ಹೀಗಾಗಿ ಆ ವ್ಯಕ್ತಿಯು ಬೆಳ್ಳಂಬೆಳಗ್ಗೆಯೇ ದಂಡ ತೆತ್ತು, ತೆಪ್ಪಗಾಗಬೇಕಾಯಿತು.

   ಇದೇ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 7-30 ರಲ್ಲಿ ಬೇಕರಿಯವರೊಬ್ಬರು ಕಸವನ್ನು ರಸ್ತೆಗೆ ಹಾಕುತ್ತಿದ್ದುದನ್ನು ಗಮನಿಸಿದ ಆರೋಗ್ಯಾಧಿಕಾರಿ ನಾಗೇಶ್ ಕುಮಾರ್ ಅವರು, ಸದರಿಯವರಿಗೆ 1000 ರೂ. ದಂಡ ವಿಧಿಸಿದ ಘಟನೆಯೂ ನಡೆಯಿತು.ಪಾಲಿಕೆಯ ಪರಿಸರ ಇಂಜಿನಿಯರ್‍ಗಳು , ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಸಹ ಇದೀಗ ಆಯುಕ್ತ ಟಿ.ಭೂಪಾಲನ್ ಅವರ ಸೂಚನೆಯ ಅನುಸಾರ ಕ್ರಿಯಾಶೀಲರಾಗಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಕಸಕ್ಕೆ ಬೆಂಕಿ ಹಾಕುವುದು ಮೊದಲಾದ ಘಟನೆಗಳು ಕಂಡುಬಂದರೆ ತಕ್ಷಣವೇ ಸಂಬಂಧಿಸಿದವರ ಮೇಲೆ ದಂಡ ವಿಧಿಸಲು ತೊಡಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap