ಕೂಡ್ಲಿಗಿ:
ತಾಲ್ಲೂಕಿನ ಹರವದಿ ಗ್ರಾಮದಲ್ಲಿ ದನ ಮೆಯುಸುತ್ತಿದ್ದ ಯುವಕ ಓಬಳೇಶ್ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.
ಗ್ರಾಮದ ಜೆ. ಓಬಳೇಶ ನಿನ್ನೆ ಸಂಜೆ ಗ್ರಾಮದ ಹೊರ ವಲಯದಲ್ಲಿ ಅರಣ್ಯದಂಚಿನಲ್ಲಿ ದನ ಮೇಯುಸುತ್ತಿದ್ದಾಗ ಮೂರು ಕರಡಿಗಳು ಪ್ರತ್ಯಕ್ಷವಾಗಿದ್ದುವು.
ಅವುಗಳಲ್ಲಿ ಒಂದು ಕರಡಿ ಓಬಳೇಶ ಮೇಲೆ ಏಕಾ ಏಕಿ ದಾಳಿ ತಲೆ, ಕೈ ಹಾಗೂ ಕಾಲುಗಳಿಗೆ ಪರಚಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ದಾಳಿಯಿಂದ ಗಾಬರಿಗೊಂಡು ಕೂಗಿಕೊಂಡಾಗ ಕರಡಿ ಅಲ್ಲಿಂದ ಓಡಿ ಹೋಗಿದೆ. ಗಾಯಳು ಕೂಡ್ಲಿಗಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಡೇಕೋಟೆ ಆರಣ್ಯಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.