ಹರಪನಹಳ್ಳಿ:
ಪ್ರಧಾನಿ ನರೇಂದ್ರ ಮೋದಿಯವರ ಮನದ ಮಾತು ಕಾರ್ಯಕ್ರಮದ ನಿಮಿತ್ತ ಪಟ್ಟಣದ ಬಸ್ ನಿಲ್ದಾಣದ ಬಳಿಯ ಇಜಾರಿ ಸಿರಸಪ್ಪ ವೃತ್ತದಲ್ಲಿ ಸಾರ್ವಜನಿಕವಾಗಿ ಪ್ರಧಾನಿಯವರ ದ್ವನಿಯನ್ನು ಕೇಳಿಸಲಾಯಿತು.ಪುಲ್ವಾನ ಬಳಿ ಬಾಂಬ್ ದಾಳಿ ಪಾಕಿಸ್ಥಾನದ ಕರಾಳ ಮುಖವನ್ನು ಇಡೀ ವಿಶ್ವಕ್ಕೆ ಸಾರಿದಂತಿದೆ. ಸೈನಿಕರಷ್ಟೇ ಅಲ್ಲ ಇಡೀ ದೇಶದ ನಾಗರೀಕರು ದೃತಿಗೆಡುವಂತಿಲ್ಲ, ನಮ್ಮ ಸರ್ಕಾರ ಸದಾ ನಿಮ್ಮ ಬೆಂಗಾವಲಿಗಿದೆ. ಇದಕ್ಕೆ ತಕ್ಕ ಉತ್ತರ ನೀಡೇ ನೀಡುತ್ತೇನೆ. ಆತಂಕವಾದ ದೇಶದಲ್ಲೇ ಇರದಂತೆ ಕ್ರಮ ಕೈಗೊಳ್ಳುವೆ ಎಂದು ತಮ್ಮ ಭಾವನೆಗಳನ್ನು ಮನೆ ಕಿ ಬತ್ ನಲ್ಲಿ ಹಂಚಿಕೊಂಡರು.
ಇಡೀ ದೇಶದ ಜನತೆಗೆ ಪಕ್ಷದ ಸಾಧನೆಗಳನ್ನು ಹಾಗೂ ಮುಂದಿನ ಭವಿಷ್ಯದಲ್ಲಿ ಅವರ ಯೋಜನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಪಕ್ಷದ ಅಧ್ಯಕ್ಷ ಕೆ. ಲಕ್ಷ್ಮಣ, ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ್, ಮುಖಂಡರಾದ ಬೆಣ್ಣಿಹಳ್ಳಿ ರೇವಣ್ಣ, ವೈ.ಕೆ.ಬಿ.ದುರುಗಪ್ಪ, ಚಿರಸ್ತೆಹಳ್ಳಿ ಬಸಣ್ಣ, ಅರಸನಾಳು ಪಾಟೀಲ್, ಗೌಳಿ ಯಲ್ಲಪ್ಪ, ದುಗ್ಗಾವತಿ ಸ್ವಾಮಿ, ಚಿಗಟೇರಿ ರೇವಣಸಿದ್ದಪ್ಪ ಹಾಗೂ ಇತರರು ಇದ್ದರು.