ಹರಿಹರ:
ಜಮೀನಿನಲ್ಲಿ ಬೆಳೆದ ವೀಳೆದೆಲೆ ಬೆಳೆ ಉಳಿಸಿಕೊಳ್ಳಲು ಆಗದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ನಾಗೇನಹಳ್ಳಿ ಗ್ರಾಮದ ಪರಮೇಶಪ್ಪ(45) ಬೆಳಿಗ್ಗಿ 11 ಗಂಟೆಯ ಸುಮಾರಿಗೆ ನೇಣಿಗೆ ಶರಣಾಗಿದ್ದಾನೆ. ಎಲೆ ಬಳ್ಳಿ ತೋಟಕ್ಕೆ ನೀರಿಲ್ಲದೆ ಒಣಗಿದ ಕಾರಣ ಮನನೊಂದು ರೈತ ವೀಳೆದೆಲೆ ತೋಟದಲ್ಲಿದ್ದ ಏಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ವ್ಯಕ್ಯಿಯು ರಾಜನಹಳ್ಳಿ ಪ್ರಾಥಮಿಕ ಕೃಷಿ ಮತ್ತಿನ ಸಹಕಾರ ಸಂಘದಲ್ಲಿ ಎಪ್ಪತ್ತೈದು ಸಾವಿರ ಪಡೆದಿದ್ದ, ಸದ್ಯ ಮನ್ನ ಆಗದ ಕಾರಣ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದನು ಎಂದು ಮೃತನ ಸಂಬಂಧಿಕರು ತಿಳಿಸಿದ್ದಾರೆ.
ಈ ವರ್ಷದಲ್ಲಿಯೇ ಇಬ್ಬರು ಗ್ರಾಮದಲ್ಲಿ ನೇಣಿಗೆ ಶರಣಾಗಿರುವುದರಿಂದ ಗ್ರಾಮದ ಜನರು ಕಣ್ಣೀರಿನ ಹೊಳೆಯನ್ನು ಹರಿಸುತ್ತಿದ್ದರು.
ವಿಷಯ ತಿಳಿದ ಕೂಡಲೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು, ತೋಟದ ಸುತ್ತ ಪರಿಶೀಲನೆ ನಡೆಸಿ, ಮುಂದಿನ ಕ್ರಮವನ್ನು ಕೈಗೊಂಡರು.ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪಿಎಸ್‍ಐ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಪ್ರಕಾಶ್ ಎಂ, ಮಹಾಂತೇಶ್ ದೊಡ್ಡಮನಿ ಹಾಗೂ ಮತ್ತಿತರರು ಹಾಜರಿದ್ದರು.