ಚೆನ್ನೈ
ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಮಾನಸಿಕ ಆರೋಗ್ಯ ಸಂಸ್ಥೆಯ (ಐಎಂಎಚ್)156 ಮಾನಸಿಕ ಅಸ್ವಸ್ಥರು ಮತಚಲಾಯಿಸಿ ಇತಿಹಾಸ ನಿರ್ಮಿಸಿದ್ದಾರೆ.
ಮೊದಲ ಬಾರಿಗೆ ಮತ ಚಲಾಯಿಸಿದ ಅವರ ಮುಖದಲ್ಲಿ ಭಾರಿ ಸಂಭ್ರಮ ಮನೆ ಮಾಡಿತ್ತು. ಹಲವು ತಂಡದಲ್ಲಿ ಬಂದ ಜನರು, ಸರತಿಯಲ್ಲಿ ಕಾದು, ಗುರುತಿನ ಚೀಟಿ ತೋರಿಸಿ ಮತಚಲಾಯಿಸಿದರು.
ಗ್ರೇಟರ್ ಚೆನ್ನೈನ ಸ್ಥಳೀಯ ಆಡಳಿತ ಐಎಂಎಚ್ ರೋಗಿಗಳಿಗೆ ಕೇಂದ್ರ ಚೆನ್ನೈ ಲೋಕಸಭಾ ಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ಕಲ್ಪಿಸಿತ್ತು. 25ರಿಂದ 90 ವರ್ಷ ವಯೋಮಾನದ ಜನರು ಮತಚಲಾಯಿಸಿದರು. ಐಎಂಎಚ್ ಕ್ಯಾಂಪಸ್ ನ ಹೆಡ್ ಓವರ್ ಸೀಸ್ ಕಚೇರಿಯಲ್ಲಿ ಇವರಿಗಾಗಿಯೇ ಮತಗಟ್ಟೆ ಸ್ಥಾಪಿಸಲಾಗಿತ್ತು.
ಐಎಂಎಚ್ ನಿರ್ದೇಶಕ ಡಾ.ಪೂರ್ಣ ಚಂದ್ರಿಕಾ, 159 ರೋಗಿಗಳ ಪೈಕಿ 156 ಜನರು ತಮ್ಮ ವೈಯಕ್ತಿಕ ಆಯ್ಕೆಯಂತೆ ಮತಚಲಾಯಿಸಿದ್ದಾರೆ. ಗುರುತಿನ ಚೀಟಿಯಲ್ಲಿ ಹೆಸರುಗಳು ತಪ್ಪಾಗಿದ್ದರಿಂದ ಮೂವರಿಗೆ ಮತದಾನದ ಅವಕಾಶ ದೊರೆಯಲಿಲ್ಲ. ಈ ರೋಗಿಗಳಿಗೆ ಸರಿಯಾಗಿ ಮತನಾಡಲಾಗದಿದ್ದರೂ, ವಿಷಯಗಳನ್ನು ಗ್ರಹಿಸುವ ಶಕ್ತಿ ಚೆನ್ನಾಗಿದೆ. ಅವರಿಗೆ ವಿವಿಧ ಪಕ್ಷಗಳ ಚಿಹ್ನೆಗಳ ಕುರಿತು ಮೊದಲೇ ಜಾಗೃತಿ ಮೂಡಿಸಲಾಗಿತ್ತು. ಅವರು ಟಿವಿ ಮೂಲಕ ಮತಚಲಾವಣೆ ಪ್ರಕ್ರಿಯೆಯ ಮಾಹಿತಿ ಪಡೆದಿದ್ದರು ಎಂದು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








