ತಿಪಟೂರು
ಮಹಾನ್ ಮಾನವತಾವಾದಿ, ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಯನ್ನು ನಗರದ ವೀರಶೈವ ಗುರುಕುಲಾನಂದಾಶ್ರಮದ ಶ್ರೀಗಳು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಬಸವೇಶ್ವರರ ಗುರುಕುಲಾನಂದಾಶ್ರಮದಲ್ಲಿರುವ ಕಂಚಿನ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು.
ನೀತಿಸಂಹಿತೆ ಇರುವ ಕಾರಣ ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಉಪವಿಭಾಗಾಧಿಕಾರಿ ಎ.ಸಿ.ಪೂವಿ, ತಾಲ್ಲೂಕು ದಂಡಾಧಿಕಾರಿ ಆರತಿ.ಬಿ ಮತ್ತು ಎಲ್ಲಾ ಸರ್ಕಾರಿ ಕಚೇರಿಗಳು ಮುಖ್ಯಸ್ಥರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು.
ನಗರದ ವಿವಿಧೆಡೆ ಬಸವ ಜಯಂತಿ ಆಚರಣೆ : ನಗರದ ಗೋವಿನಪುರದ ಬಸವೇಶ್ವರ ದೇವಸ್ಥಾನ, ಶಿವಕುಮಾರಸ್ವಾಮೀಜಿ (ಹಾಸನ ವೃತ್ತ) ವೃತ್ತ ಮತ್ತು ಹಲವಾರು ಹಳ್ಳಿಗಳಲ್ಲಿ ಬಸವೇಶ್ವರ ಜಯಂತಿಯನ್ನು ಪಾನಕ, ಫಲಹಾರವನ್ನು ನೀಡುವುದರ ಮೂಲಕ ಆಚರಿಸಲಾಯಿತು.
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕೆ.ಕುಮಾರಸ್ವಾಮಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಎಸ್. ಕಾಂತರಾಜಯ್ಯ, ಕಚೇರಿ ಸಿಬ್ಬಂದಿ ಚಿಕ್ಕೇಗೌಡ, ಆನಂದ, ಗುರುಪಾದಯ್ಯ ಮುಂತಾದವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಸುವ ಮೂಲಕ ಆಚರಿಸಿದರು.ಅಕ್ಷಯ ತೃತೀಯದ ದಿನವಾದ್ದರಿಂದ ಹೆಂಗಳೆಯರು ಚಿನ್ನಖರೀದಿಸುವ ಭರಾಟೆಯಲ್ಲಿ ತೊಡಗಿದ್ದರು.