ಮಾನವೀಯ ಮೌಲ್ಯವನ್ನು ತುಂಬುವ ಶಕ್ತಿ ಕಲೆಯಲ್ಲಿದೆ

ತುಮಕೂರು:

      ಕಲೆ ಮತ್ತು ಸಾಹಿತ್ಯ ಸಂಸ್ಕೃತಿ, ಭಜನೆ, ತತ್ವಪದ, ಕೀರ್ತನೆಗಳು, ಭಾರತೀಯ ಸಾಂಸ್ಕೃತಿಕ ಕಲಾ ಪ್ರಕಾರಗಳಲ್ಲಿ ಶ್ರೇಷ್ಠ ಹಾಗೂ ಶೃಜನಶೀಲ ಪರಂಪರೆಗಳಾಗಿ ಆದಿಕಾಲದಿಂದಲೂ ಮನುಕುಲಕ್ಕೆ ಮಾನವೀಯ ಮೌಲ್ಯವನ್ನು ತುಂಬುವಂತಹ ಶಕ್ತಿಯಾಗಿದೆ ಎಂದು ಮುಂಜಾನೆ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮೀನರಸಿಂಹಶೆಟ್ಟರು ತಿಳಿಸಿದರು.

      ಅವರು ಶ್ರೀ ಸಿದ್ಧಗಿರಿ ಶನೈಶ್ಚರ ಕ್ಷೇತ್ರದಲ್ಲಿ ಕೀರ್ತನ ರಂಗಬಳಗ, ತುಮಕೂರು, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೌರಾಣಿಕ ರಂಗಗೀತೆ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮವನ್ನು ಸಂಗೀತವಾದನ ನುಡಿಸಿ ಬಬ್ರುವಾಹನ, ಚಲನಚಿತ್ರಗೀತೆಯನ್ನು ಹಾಡುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿಶೇಷವಾಗಿ ಯುವಶಕ್ತಿಗೆ ನೆನಪಿಸುವಂತಹ ಹಾಗೂ ಜೀವನದ ಅರಿವನ್ನು ಮೂಡಿಸುವಂತಹ ಶಕ್ತಿಕೇಂದ್ರಗಳಾಗಿವೆ. ಜನಪದ ಸಾಹಿತ್ಯ ಹಾಗೂ ರಂಗಕಲೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

      ತುಮಕೂರು ಜಿಲ್ಲೆ ಇತಿಹಾಸ ಪುಟದಲ್ಲಿ ಉಳಿಯುವಂತೆ ಮಾಡಿರುವ ದೇಶಿಯ ಕಲೆಯಾದ ಜನಪದ ಮತ್ತು ಪೌರಾಣಿಕ ರಂಗಭೂಮಿ ಹಳ್ಳಿ ಹಳ್ಳಿಗಳಲ್ಲಿ ಮಾನವೀಯ ಮನಸ್ಸುಗಳನ್ನು ಬೆಸೆಯುವಂತಹ ಮಹತ್ವವನ್ನು ಹೊಂದಿವೆ. ಇತಿಹಾಸದ ಪುಟಗಳಲ್ಲಿ ತುಮಕೂರು ಜಿಲ್ಲೆಯ ನಾಟಕರತ್ನ ಡಾ.ಗುಬ್ಬಿ ವೀರಣ್ಣನವರು ಬೆಳ್ಳಾವಿ, ನರಹರಿ ಶಾಸ್ತ್ರಿಗಳು, ಕಲಾವಂತಿಕೆಯನ್ನು ಜೀವಂತಗೊಳಿಸಿ ಸಂಸ್ಕಾರ ಯುತವಾದ ಸಾಂಸ್ಕøತಿಕ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಶ್ರೇಷ್ಠರಾಗಿದ್ದಾರೆ ಎಂದರು.

      ಇಂತಹ ಶಕ್ತಿ ಕೇಂದ್ರಗಳು ಹಾಗೂ ಕೀರ್ತನ ರಂಗಬಳಗದಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಅನೇಕ ಮಕ್ಕಳಿಗೆ ಕಥಾ ಕೀರ್ತನ, ಜನಪದ ಗೀತೆಗಳು, ರಂಗಗೀತೆಗಳು, ಅಭಿನಯ ಇವುಗಳನ್ನು ಉಚಿತವಾಗಿ ಹೇಳಿಕೊಡುವುದರ ಮೂಲಕ ಹೆಣ್ಣು ಮಕ್ಕಳಿಗೆ ಕಥಾ ಕೀರ್ತನೆಯನ್ನು ಹೇಳಿಕೊಟ್ಟು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಸಾಮಥ್ರ್ಯವನ್ನು ನೀಡುವುದರಲ್ಲಿ ಅಧ್ಯಕ್ಷರಾದ ನರಸಿಂಹದಾಸ್ ಅವರು ದೃಶ್ಯ ಮಾಧ್ಯಮದವರೆವಿಗೂ ಸಾಂಸ್ಕೃತಿಕ ಪ್ರಕಾರಗಳನ್ನು ಮಕ್ಕಳಿಗೆ ಹೇಳಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

     ನರಸಿಂಹದಾಸ್ ಅವರು ಕೇವಲ 30 ನಿಮಿಷಗಳಲ್ಲಿ ನಡೆಸಿಕೊಟ್ಟಂತಹ ವಿಶ್ವದಾರಿದೀಪವಾದ ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಜೀವನದರ್ಶನ ಎಂಬ ಕಥಾ ಕೀರ್ತನ ಹರಿದಾಸ ಪರಂಪರೆಯನ್ನು ಜನ ಕಥಾ ಕೀರ್ತನಕ್ಕೆ ಅಳವಡಿಸಿಕೊಂಡಿರುವ ಇವರ ಕಲಾವಂತಿಕೆ ಎಲ್ಲರ ಮನಸ್ಸನ್ನು ಸಾಂಸ್ಕೃತಿಕ ಲೋಕದೆಡೆಗೆ ಕೊಂಡೊಯ್ದು ಸಂಗೀತವೂ ಸಹ ಅನೇಕ ರೋಗ ರುಜಿನಗಳನ್ನು ಮರೆತು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವಂತಹ ಶಕ್ತಿ ಇದೆ ಎಂಬುದನ್ನು ವಿವರಿಸಿದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯದರ್ಶಿ ಚನ್ನವೀರಸ್ವಾಮಿ ಮತ್ತು ಖಜಾಂಚಿ ಜನಾರ್ಧನ್ ಅವರು ಮಾತನಾಡಿ ಇವರ ಎಲ್ಲಾ ಸಾಧನೆಯ ಮುಖ್ಯ ಪ್ರೇರಕ ಶಕ್ತಿ ಇವರ ಜೀವನೋಪಾಯದ ಶಕ್ತಿ ಕೇಂದ್ರವಾಗಿದ್ದ ತುಮಕೂರು ಗಡಿಯಾರ ಕಾರ್ಖಾನೆಯ ಲಲಿತ ಕಲಾ ಸಂಘ ಅನೇಕ ಕಲಾವಿದರನ್ನು ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ನೆನಪಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷ ನರಸಿಂಹದಾಸ್ ಮತ್ತು ಕಾರ್ಯದರ್ಶಿ ಕೆಂಪರಾಜು ಉಪಸ್ಥಿತರಿದ್ದರು. ಕೊರಟಗೆರೆ ತಾಲ್ಲೂಕು ನಾಗರಾಜು, ಅಶ್ವತ್ಥನಾರಾಯಣ್ ಮತ್ತು ಕು.ಲಾವಣ್ಯ ಅವರ ತಂಡ ಪೌರಾಣಿಕ ರಂಗಗೀತೆ ಮತ್ತು ಜಾನಪದ ಗೀತೆಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link