ಸ್ಫೋಟಕ ಮಾಹಿತಿ ನೀಡಿದ ಮಸ್ಸೂರ್ ಖಾನ್..!!!

ಬೆಂಗಳೂರು

    ಬಹುಕೋಟಿ ವಂಚಕ ಐಎಂಎ ಸಮೂಹ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಮನ್ಸೂರ್‍ಖಾನ್ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ವಿಚಾರಣೆಯಲ್ಲಿ 1 ಸಾವಿರ ಕೋಟಿಗೂ ಹೆಚ್ಚಿನ ಹಣಕಾಸಿನ ರಹಸ್ಯ ವ್ಯವಹಾರವನ್ನು ಬಾಯ್ಬಿಟ್ಟಿದ್ದಾನೆ.

     ಮಂಗಳವಾರದವರೆಗೆ ವಶಕ್ಕೆ ಪಡೆದುಕೊಂಡು ಇಡಿ ಅಧಿಕಾರಿಗಳು ನಡೆಸಿರುವ ವಿಚಾರಣೆಯಲ್ಲಿ ಮನ್ಸೂರ್ ಖಾನ್ 1 ಸಾವಿರ ಕೋಟಿಗೂ ಹೆಚ್ಚಿನ ಹಣಕಾಸಿನ ರಹಸ್ಯ ವ್ಯವಹಾರ ಹಾಗೂ ತನ್ನ ಬಳಿ ಹಣ ಪಡೆದ ಹಾಗೂ ಹಣಕಾಸಿನ ವ್ಯವಹಾರ ನಡೆಸಿರುವ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮಾಹಿತಿ ನೀಡಿದ್ದಾನೆ.

      ತನ್ನ ವ್ಯವಹಾರದಲ್ಲಿ ಸಂಪರ್ಕ ಹೊಂದಿದ್ದು ಹಲವು ಪ್ರಭಾವಿ ರಾಜಕಾರಣಿಗಳು ಅಧಿಕಾರಿಗಳ ಹೆಸರು ಅವರು ಹಾಗೂ ಅವರಿಗೆ ನೀಡಿರುವ ಹಣಕಾಸಿನ ದಾಖಲೆಯನ್ನು ಅಂಕಿ ಸಂಖ್ಯೆಯ ಸಹಿತ ನೀಡಿರುವುದಾಗಿ ತಿಳಿಸಿದ್ದಾನೆ ಎಂದು ಇಡಿ ಮೂಲಗಳು ತಿಳಿಸಿವೆ.ಲಾಭಾಂಶ ಹಂಚಿಕೆಯ ಮೇಲೆ ಸುಮಾರು 60 ಸಾವಿರ ಮಂದಿ ಷೇರುದಾರರಿಂದ 1,410 ಕೋಟಿ ರೂ. ಗಳನ್ನು ಹೂಡಿಕೆ ಮಾಡಿಸಿಕೊಂಡಿರುವುದನ್ನು ಒಪ್ಪಿಕೊಂಡ ಮನ್ಸೂರ್ ಬಹಳಷ್ಟು ಹೂಡಿಕೆದಾರರಿಗೆ ಲಾಭಾಂಸದ ಆಧಾರದಲ್ಲಿ ಹಣ ಪಾವತಿಸಲಾಗಿದೆ ನನ್ನ ಬಳಿಯಿರುವ ಆಸ್ತಿ-ಪಾಸ್ತಿಗಳನ್ನು ಮಾರಾಟ ಮಾಡಿದರೆ ಹೂಡಿಕೆದಾರರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾನೆ.

      ಇಲ್ಲಿಯವರೆಗೆ ಜಪ್ತಿ ಮಾಡಿಕೊಂಡಿರುವ ಆಸ್ತಿ-ಪಾಸ್ತಿ ಅಲ್ಲದೇ ರಾಜಕಾರಣಿಗಳು ಅಧಿಕಾರಿಗಳಿಗೆ ನೀಡಿರುವ ಹಣವನ್ನು ಸೇರಿಸಿದರೆ ಹೂಡಿಕೆದಾರರು ತಾವು ಹೂಡಿಕೆ ಮಾಡಿರುವಷ್ಟು ಹಣ ವಾಪಸ್ ಮಾಡಲು ಸಾಧ್ಯವಾಗಲಿದೆ ನನ್ನ ಬಳಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಳವಾರು ನೆರವು ಪಡೆದಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

      ಈ ನಡುವೆ ಕಂಪನಿಯಿಂದ ಆರಂಭಿಸಿದ್ದ ಐಎಂಎ ಜ್ಯುವೆಲರ್ಸ್, ಫ್ರಂಟ್ ಲೈನ್ ಫಾರ್ಮ, ರಿಯಲ್ ಎಸ್ಟೇಟ್ ಉದ್ಯಮ, ಚಿನ್ನ, ಬೆಳ್ಳಿ, ವಜ್ರದ ವ್ಯಾಪಾರದ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿಕೊಂಡಿರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ.ಕೆಲವು ರಾಜಕಾರಣಿಗಳು, ಅಧಿಕಾರಿಗಳಿಗೆ ನೀಡಿರುವ ಹಣಕಾಸಿನ ಮಾಹಿತಿ ನಡೆಸಿರುವ ವ್ಯವಹಾರ, ಇನ್ನಿತರ ಪ್ರಶ್ನೆಗಳನ್ನಿಟ್ಟುಕೊಂಡು ಅಧಿಕಾರಿಗಳು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಯ ಹೇಳಿಕೆಗಳನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

       ಪ್ರಭಾವಿಗಳ ಜೊತೆಗಿನ ನಂಟು ಹಾಗೂ ಪ್ರಭಾವಿಗಳಿಗೆ ಹಂಚಿಕೆಯಾಗಿರುವ ಐಎಂಎನ ಲಾಭಾಂಶದ ಕುರಿತು ಮನ್ಸೂರ್ ಬಾಯ್ಬಿಟ್ಟಿದ್ದಾನೆ. ಮನ್ಸೂರ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಆತನಿಗೆ ಹೈ ಸೆಕ್ಯುರಿಟಿ ನೀಡಲಾಗಿದೆ. ಹೀಗಾಗಿ ಖಾನ್‍ಗೆ ರಾತ್ರಿಯಿಡಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ. ಸದ್ಯ ಶಾಂತಿನಗರದ ಇಡಿ ಕಚೇರಿಯಲ್ಲಿ ಮನ್ಸೂರ್ ನನ್ನು ಇಡಿ ಅಧಿಕಾರಿಗಳು ಇರಿಸಿದ್ದಾರೆ.

      ಐಎಂಎ ಕಚೇರಿ ಸೇರಿದಂತೆ ಮನ್ಸೂರ್ ಖಾನ್ ಮನೆ ಮೇಲೆ ದಾಳಿ ನಡೆಸಿದ ವೇಳೆ ಲಭ್ಯವಾದ ಆಸ್ತಿಪಾಸ್ತಿ, ಚಿನ್ನಾಭರಣಗಳು, ದಾಖಲೆಗಳ ಕುರಿತು ಇಡಿ ವಿಚಾರಣೆ ನಡೆಸುತ್ತಿದೆ. ಇನ್ನೊಂದೆಡೆ, ಎಸ್‍ಐಟಿ ಹಾಗೂ ತೆಲಂಗಾಣ ಪೆÇಲೀಸರು ಕೂಡ ಮನ್ಸೂರ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.ಇಡಿ ಅಧಿಕಾರಿಗಳು ಇನ್ನು ಎರಡು ದಿನಗಳ ವಿಚಾರಣೆ ನಡೆಸಿದ ನಂತರ, ಆತನನ್ನು ವಿಶೇಷ ತನಿಖಾ ತಂಡದ (ಎಸ್‍ಐಟಿ) ಅಧಿಕಾರಿಗಳ ವಶಕ್ಕೆ ನೀಡಲಿದ್ದು ಎಸ್‍ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link