ಮನ್ಸೂರ್ ಖಾನ್ ಸೆ 30ರ ವರೆಗೆ ಸಿಬಿಐ ವಶಕ್ಕೆ..!

ಬೆಂಗಳೂರು

   ಐಎಂಎ ಬಹುಕೋಟಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಮುಹ್ಮದ್ ಮನ್ಸೂರ್​ ಖಾನ್​ ನನ್ನು ಮತ್ತೆ ಸೆ.30ರ ವರೆಗೆ ಸಿಬಿಐ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

    ಶುಕ್ರವಾರ ಪ್ರಮುಖ ಆರೋಪಿ ಮನ್ಸೂರ್​ ಖಾನ್​, ನಿಜಾಮುದ್ದೀನ್​, ನಾಸೀರ್​ ಹುಸೇನ್​ ಹಾಗೂ ನವೀದ್​ ಅಹ್ಮದ್​ ಅವರ ಸಿಬಿಐ ಕಸ್ಟಡಿ ಅಂತ್ಯಗೊಂಡಿತ್ತು. ಹೀಗಾಗಿ ಅವರನ್ನು ಸಿಬಿಐ ಅಧಿಕಾರಿಗಳು ಇಂದು ಸಿವಿಲ್​ ಕೋರ್ಟ್​ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ಮನ್ಸೂರ್​ ಖಾನ್​ ಮತ್ತು ನವೀದ್​ ಅಹ್ಮದ್​ನನ್ನು ಮತ್ತೆ ಸೆ.30ರ ವರೆಗೆ ಸಿಬಿಐ ಕಸ್ಟಡಿಗೆ ನೀಡಬೇಕು ಎಂದು ಆದೇಶಿಸಿದರು. ಇನ್ನುಳಿದ ನಿಜಾಮುದ್ದೀನ್​ ಮತ್ತು ನಾಸೀರ್​ ಹುಸೇನ್​ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ ಎಂದು ಆದೇಶ ನೀಡಿದೆ.

    ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಎಫ್​ಐಆರ್​ನಲ್ಲಿ ಹೆಸರಿಸದ ಮತ್ತೊಬ್ಬ ಆರೋಪಿಯ ಹೇಳಿಕೆ ಪಡೆಯಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಮನ್ಸೂರ್​ ಹಾಗೂ ನವೀದ್​ ಅವರಿಂದ ಅಧಿಕಾರಿಗಳು ಉತ್ತರ ಪಡೆಯಬೇಕಿದೆ. ಆದ್ದರಿಂದ ಅವರಿಬ್ಬರನ್ನೂ ಕಸ್ಟಡಿಗೆ ನೀಡಿ ಎಂದು ಸಿಬಿಐ ಪರ ವಕೀಲ ಸುದರ್ಶನ್​ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap