ಮಾರಿಯಮ್ಮದೇವಿಯ ಅದ್ದೂರಿ ಜಾತ್ರೋತ್ಸವ

ತುಮಕೂರು

     ನಗರದ ಮಾರಿಯಮ್ಮ ನಗರದ ಮಾರಿಯಮ್ಮದೇವಿಯ 56ನೇ ಜಾತ್ರಾ ಮಹೋತ್ಸವಕ್ಕೆ ಮಹಾನಗರ ಪಾಲಿಕೆಯಆಯುಕ್ತ ಟಿ.ಭೂಬಾಲನ್ ಚಾಲನೆ ನೀಡಿ ನಗರದಲ್ಲಿರುವ ಕೊಳಗೇರಿಗಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಪ್ರಸಕ್ತ ನಗರ ಪಾಲಿಕೆ ಬಜೆಟ್‍ನ ಮುಕ್ತ ನಿಧಿಯಲ್ಲಿ ಸೌಕರ್ಯಗಳನ್ನು ಕಲ್ಪಿಸಲು ಹಣ ಮೀಸಲಿಡಲಾಗುವುದು ಎಂದರು.

     ಖಾತೆಗಳು ಇಲ್ಲದ ಕೊಳಚೆ ಪ್ರದೇಶಗಳಿಗೆ ಕಂದಾಯ ನಿಗದಿಗೊಳಿಸಿ ನಗರ ಪಾಲಿಕೆಯಿಂದ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ತುಮಕೂರು ಸ್ಮಾಟ್  ಸಿಟಿ ಲಿಮಿಟೆಡ್‍ ನಿಂದ ಮಾರಿಯಮ್ಮ ನಗರದ ಕುಟುಂಬಗಳಿಗೆ ವಸತಿ ನಿರ್ಮಾಣವನ್ನು ಈಗಾಗಲೇ ಮಾಡಲಾಗುತ್ತಿದೆ ದುಡಿಯುವ ಜನ ವಸತಿ ಪ್ರದೇಶಗಳಿಗೆ ನಗರ ಪಾಲಿಕೆಯಿಂದ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಬದ್ದವಿರುವುದಾಗಿ ಹೇಳಿದರು.

      ತುಮಕೂರು ನಗರ ಕೊಳಗೇರಿಗಳ ಪ್ರಮುಖ ಸಮಸ್ಯೆಗಳನ್ನು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿರವರು ಆಯುಕ್ತರಿಗೆ ತಿಳಿಸಿ, ಪಾಲಿಕೆ ಬಜೆಟ್‍ನಲ್ಲಿ ಅದ್ಯತೆ ನೀಡಬೇಕೆಂದು ಕೋರಿದರು.

      ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜ್, ವೃತ್ತ ನೀರಿಕ್ಷಕ ಚಂದ್ರಶೇಖರ್, ನಗರಠಾಣೆಯ ಸಬ್‍ಇನ್ಸ್ಪೆಕ್ಟರ್ ಶೋಭಾಂಬಿಕ, ಕೊಳಗೇರಿ ಅಭೀವೃದ್ದಿ ಮಂಡಳಿಯ ಅಭಿಯಂತರಾದ ಹನುಮಂತರೆಡ್ಡಿ, ನಗರಸಭೆಯ ಮಾಜಿ ಅಧ್ಯಕ್ಷ ಎಂ.ಪಿ.ಮಹೇಶ್, ಕೊಳಗೇರಿ ಸಮಿತಿಯ ಕಾರ್ಯದರ್ಶಿಯಾದ ಶೆಟ್ಟಾಳಯ್ಯ ಮಾರಿಯಮ್ಮ ಯುವಕ ಸಂಘದ ಪದಾಧಿಕಾರಿಗಳಾದ ಕಣ್ಣನ್, ಅಟೇಕರ್, ಕೃಷ್ಣ, ಮುರುಗ, ಕಾಶಿ, ಚಕ್ರಪಾಣಿ, ಮಾದವನ್, ರಾಜ,ಚೆಲುವರಾಜ್, ಜೈಪಾಲ್, ಮಾರಿಮುತ್ತು, ಗೋವಿಂದಸ್ವಾಮಿ ಸಂಘದ ಪದಾಧಿಕಾರಿಗಳು ಹಾಜರಿದರು. ಮಂಡಿಪೇಟೆ, ಬಿ.ಜಿ.ಪಾಳ್ಯ ಸರ್ಕಲ್, ಟೌನ್‍ಹಾಲ್, ಎಂ.ಜಿ.ರಸ್ತೆ ಮಾರ್ಗವಾಗಿ ಬಾಳನಕಟ್ಟೆಯವರೆಗೆ ಅದ್ದೂರಿಯಾದ ಉತ್ಸವ ಸಾಗಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link