ಸಂತೆ ಜಾಗ ಬದಲಾವಣೆ ವ್ಯಾಪಾರಸ್ಥರಲ್ಲೆ ಗೊಂದಲ

ಚಿಕ್ಕನಾಯಕನಹಳ್ಳಿ :
    ಪಟ್ಟಣದಲ್ಲಿ ನಡೆಯುತ್ತಿರುವ ಸಂತೆ ಜಾಗ ಬದಲಾವಣೆ ಎನ್ನುತ್ತಿದ್ದಂತೆ ಕೆಲ ವ್ಯಾಪಾರಸ್ಥರು ನೂತನ ಸಂತೆ ಜಾಗವಾದ ಎಪಿಎಂಸಿ ಆವರಣದಲ್ಲಿ ಇದು ನಮ್ಮ ಜಾಗ ಎಂದು ಗುರುತು ಮಾಡಿಕೊಳ್ಳಲು ರಂಗೋಲಿಗಳಲ್ಲಿ ತಮ್ಮ ಹೆಸರುಗಳನ್ನು ಗುರುತು ಮಾಡುತ್ತಿದ್ದಾರೆ. ಪುರಸಭೆಯು ವ್ಯಾಪಾರಸ್ಥರಿಗೆ ಅನುಕೂಲವಾಗಲು ಜೆಸಿಬಿ ಮೂಲಕ ಸಂತೆ ಜಾಗವನ್ನು ಮಟ್ಟ ಮಾಡುತ್ತಿದೆ.
    ಪ್ರತಿ ಸೋಮವಾರ ಪಟ್ಟಣದಲ್ಲಿ ಸಂತೆ ನಡೆಯುತ್ತದೆ, ಈ ಹಿಂದೆ ತೀ.ನಂ.ಶ್ರೀ ಭವನದ ಆವರಣದಲ್ಲಿ ಹಾಗೂ ಸರ್ಕಾರಿ ಕಾಲೇಜಿಗೆ ತೆರಳುವ ರಸ್ತೆ ಯಲ್ಲಿ ಸಂತೆ ನಡೆಯುತ್ತಿತ್ತು, ಇದರಿಂದ ತೊಂದರೆಯಾಗುತ್ತದೆ ಎಂದು ಹಲವರು ದೂರಿದ ಹಿನ್ನಲೆಯಲ್ಲಿ ಸಂತೆ ಜಾಗವನ್ನು ಎಪಿಎಂಸಿ ಆವರಣಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ಪ್ರಕಟಣೆ ಹೊರಡಿಸುತ್ತಿದ್ದಂತೆ ಕೆಲ ವ್ಯಾಪಾರಸ್ಥರು ಎಪಿಎಂಸಿಗೆ ಆವರಣಕ್ಕೆ ತೆರಳಿ ಸಂತೆ ಜಾಗವನ್ನು ಗುರುತು ಮಾಡಿಕೊಳ್ಳುತ್ತಿದ್ದಾರೆ.
     ಎಪಿಎಂಸಿ ಆವರಣದಲ್ಲಿ ಪ್ರತಿ ಸೋಮವಾರ ನಡೆಯುವಂತೆ ಕುರಿ ಸಂತೆ ಅದೆ ಜಾಗದಲ್ಲಿ ನಡೆಯುತ್ತದೆ, ಕುರಿ ಸಂತೆ ನಡೆಯುವ ಕೆಳಗಿನ ಉಳಿದ ಜಾಗದಲ್ಲಿ ತರಕಾರಿ ಸಂತೆ ನಡೆಯಲಿದೆ ಹಾಗಾಗಿ ಆ ಸ್ಥಳದಲ್ಲಿ ಬೆಳೆದಿರುವ ಗಿಡಗಂಟೆ, ಅನೈರ್ಮಲ್ಯವನ್ನು ಸ್ವಚ್ಛಗೊಳಿಸಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪುರಸಭೆ ಮುಂದಾಗುತ್ತಿದೆ.
    ಎಪಿಎಂಸಿ ಆವರಣದಕ್ಕೆ ಸಂತೆ ಸ್ಥಳಾಂತರಿಸಬಾರದು ಎಂದು ಕೆಲ ವ್ಯಾಪಾರಸ್ಥರು ಪುರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು, ಆದರೆ ಇನ್ನು ಕೆಲವು ವ್ಯಾಪಾರಸ್ಥರು ಹೊಸ ಸ್ಥಳದಲ್ಲಿ ತಮ್ಮ ಜಾಗವನ್ನು ಮೀಸಲಿರಿಸಿಕೊಳ್ಳಲು ಮುಂದಾಗಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ನಾಳೆ ಸೋಮವಾರದ ಸಂತೆ ಎಲ್ಲಿ ಹೇಗೆ ನಡೆಯುತ್ತದೆ ಎಂದು ಕಾದು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link