ರೈತರನ್ನು ಮದುವೆಯಾಗಿ ಒಂದು ಲಕ್ಷ ನಿಮ್ಮದಾಗಿಸಿ…!!!

ಕಾರವಾರ :  

       ರೈತ ಎಂದರೆ ಅನಕ್ಷರಸ್ತ ಬಡವ ಸದಾ ಭೂಮಿಯಲ್ಲಿ ಬರುವ ಾದಾಯವನ್ನು ನಂಬಿ ಜೀವನ ನಡೆಸುವವ ಎಂದು ಮೂಗು ಮುರಿಯುವಾಗ ರೈತರ ಮದುವೆ ಎಂಬ ವಿಷಯ ಕೇಳಿದರೆ ಮುಗಿದೇ ಹೋಯಿತು ಅವರಕಡೆ ತಿರುಗಿಯೂ ನೋಡದ ಈ ಕಾಲದಲ್ಲಿ ಕಾರವಾರ ಜಿಲ್ಲೆಯ ಗ್ರಾಮವೊಂದರಲ್ಲಿ ಕೃಷಿಕರನ್ನು ಕೈ ಹಿಡಿಯುವ ಯುವತಿಯ ಹೆಸರಿನಲ್ಲಿ 1 ಲಕ್ಷ ಠೇವಣಿ ಇಡಲಾಗುತ್ತಿದೆ.

       ಹೌದು…!!!! ಇದು ಅಕ್ಷರಶಃ ನಿಜ ಕೃಷಿಕರನನ್ನು ಮದುವೆ ಯಾಗುವ  ಹುಡುಗಿ ಹೆಸರಿನಲ್ಲಿ ಬರೊಬ್ಬರಿ 1 ಲಕ್ಷದ ಠೇವಣಿ ಇಡಲಾಗುತ್ತದೆ. ಗ್ರಾಮೀಣ ಪ್ರದೇಶದ ಯುವಕರನ್ನು ವಿವಾಹವಾಗಲು ಯುವತಿಯರು ಹಿಂದೇಟು ಹಾಕುವುದನ್ನು ತಪ್ಪಿಸಲು ಸೇವಾ ಸಹಕಾರಿ ಸಂಘವೊಂದು ಈ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

       ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ಇಂತಹ ಯೋಜನೆಯನ್ನು ಪ್ರಕಟಿಸಿದೆ. ಗ್ರಾಮದಲ್ಲಿರುವ ಎಲ್ಲ ಜಾತಿ, ಧರ್ಮದ ಕೃಷಿಕರನ್ನು ವರಿಸುವ ಯುವತಿ ಈ ಸೌಲಭ್ಯ ಪಡೆಯಲಿದ್ದಾರೆ.

       ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಸೌಲಭ್ಯ ಇದ್ದರೂ ಯುವತಿಯರು ಮಾತ್ರ ಗ್ರಾಮೀಣ ಪ್ರದೇಶದ ಯುವಕರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಅದರಲ್ಲೂ ಕೃಷಿಕ ಕುಟುಂಬವೆಂದರೆ ಅದೇಕೋ ನಿರಾಸಕ್ತಿ. ಹೀಗಾಗಿ ಗ್ರಾಮಾಂತರ ಪ್ರದೇಶದ ಕೃಷಿ ಕುಟುಂಬದ ಯುವಕರು ಮದುವೆ ಕಾಣುವುದು ಕಷ್ಟದ ಮಾತು. ಈಗ ಆನಗೋಡ ಗ್ರಾಮದ ಸೇವಾ ಸಹಕಾರಿ ಸಂಘ ಗ್ರಾಮೀಣ ಕೃಷಿಕ ಯುವಕರ ನೆರವಿಗೆ ಬಂದಿದೆ.

      ಬರುವ ಮಾರ್ಚ್ ನಿಂದ ಈ ಯೋಜನೆ ಜಾರಿಯಾಗಲಿದೆ. ಅಂದ ಹಾಗೆ ಸೊಸೈಟಿ ಇದಕ್ಕೆ ಕೆಲವು ನಿಬಂಧನೆಗಳನ್ನೂ ಹಾಕಿದೆ. ವಿವಾಹ ಆಗುವವರು ಈ ಸೊಸೈಟಿಯ ಸದಸ್ಯರಾಗಿರಬೇಕು. ಪ್ರತಿ ವರ್ಷ 3-4 ಲಕ್ಷ ವಹಿವಾಟನ್ನು ಸೊಸೈಟಿಯಲ್ಲಿ ನಡೆಸಬೇಕು. ಸೊಸೈಟಿಯಲ್ಲಿ ಅಡಕೆ ಮಾರಾಟ, ಗೊಬ್ಬರ, ಹಿಂಡಿ, ಸಿಮೆಂಟ್‌, ಕಬ್ಬಿಣ ಮಾರಾಟ ನಡೆಯುವುದರಿಂದ 3-4 ಲಕ್ಷ ವಹಿವಾಟು ತುಂಬ ಸುಲಭ. ಅಲ್ಲದೆ ಸದ್ಯದಲ್ಲೆ ಎಲ್ಲ ದಿನಸಿ ಸಾಮಗ್ರಿಗಳು, ಕೃಷಿ ಉಪಕರಣಗಳು, ಸ್ಟೇಶನರಿ ಸೇರಿದಂತೆ ಎಲ್ಲ ವಸ್ತುಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ವ್ಯಾಪಾರ ವಹಿವಾಟಿನಲ್ಲಿ ಆದ ಲಾಭವನ್ನು ಮದುವೆಗಾಗಿ ವಿನಿಯೋಗಿಸಲು ನಿರ್ಧರಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap