ಮರುಳಾರಾಧ್ಯ ಶ್ರೀಗಳ ಸಮಾಜ ಸೇವೆ ಮಹತ್ವದ್ದು

ಚಿತ್ರದುರ್ಗ

     ಶ್ರೀಗಳು ಹಣಕ್ಕೆ ಮಾನ್ಯತೆ ನೀಡದೇ ಭಕ್ತಾಧಿಗಳಿಗೆ ಮಾನ್ಯತೆಯನ್ನು ನೀಡಿದ್ದರಿಂದ ಇಂದು ಸಹಾ ಶ್ರೀಗಳನ್ನು ಸ್ಮರಣೆ ಮಾಡುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಲಕ್ಷ್ಮೀಶ್ವರದ ಕರೇವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜನ ಶಿವಾಚಾರ್ಯ ಶ್ರೀಗಳು ತಿಳಿಸಿದರು.

    ನಗರದ ರಂಗಯ್ಯನ ಬಾಗಿಲ ಬಳಿಯ ಉಜ್ಜಯಿನಿ ಮಠದಲ್ಲಿಂದು ನಡೆದ ಲಿಂ.ಮರುಳಾಧ್ಯ ಶಿವಾಚಾರ್ಯ ಶ್ರೀಗಳ 24ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಜನ ಜಾಗೃತಿ ಹಾಗೂ ಧರ್ಮ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ತಮ್ಮ ಸೇವಾವಧಿಯಲ್ಲಿ ಸಮಾಜ ಸೇವೆಯನ್ನು ಮಾಡುವುದರ ಮೂಲಕ ಮಠದ ಪ್ರಗತಿಗೆ ಕಾರಣರಾಗಿದ್ದಾರೆ. ತುಂಬ ಹಳೆಯದಾಗಿದ್ದ ಮಠವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶ್ರೀಗಳ ಸಾಧನೆಯನ್ನು ತಿಳಿದು ಸಾಧ್ಯವಾದಷ್ಟು ಸಮಾಜದ ಪ್ರಗತಿಗೆ ಕಾರಣರಾಗಬೇಕಿದೆ ಎಂದು ಭಕ್ತ ಸಮೂಹಕ್ಕೆ ಕರೆ ನೀಡಿದರು.

    ಶ್ರೀಗಳು ತಮ್ಮ ಸೇವಾವಧಿಯಲ್ಲಿ ಹಣಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡದೆ ಭಕ್ತರನ್ನು ಸೇರಿಸಿಕೊಂಡು ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಿದ್ದರಿಂದ ಇಂದು ಅವರು ಲಿಂಗೈಕ್ಯರಾಗಿ 24 ವರ್ಷಗಳಾದರು ಸಹಾ ನೆನಪಿಸಿಕೊಂಡು ಸ್ಮರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ ಶ್ರೀಗಳು, ಚಿತ್ರದುರ್ಗ ಮಾತ್ರವಲ್ಲದೆ ಮೈಸೂರಿನಲ್ಲಿಯೂ ಸಹಾ ಜಪಮಠವನ್ನು ಅಭೀವೃದ್ದಿ ಮಾಡುವಲ್ಲಿ ಅವರ ಪಾತ್ರ ಹೆಚ್ಚಿನದ್ದಾಗಿದೆ. ಪಂಚಚಾರ್ಯ ಕಲ್ಯಾಣ ಮಂಟಪ ನಿರ್ಮಾಣದಲ್ಲಿಯೂ ಸಹಾ ಅವರು ಹೆಚ್ಚಿನ ಶ್ರಮವನ್ನು ಹಾಕಿದ್ದರಿಂದ ನಗರದಲ್ಲಿ ಉತ್ತಮವಾದ ಕಲ್ಯಾಣ ಮಂಟಪ ನಿರ್ಮಾಣವಾಗಿದೆ ಎಂದರು.

     ಶ್ರೀಗಳು ಅಕ್ಷರ ದಸೋಹಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡಿದ್ದರಿಂದ ಇಂದು ಅದರಲ್ಲಿ ಕಲಿತ ಸಾವಿರಾರು ಮಕ್ಕಳು ಉನ್ನತವಾದ ಸ್ಥಾನವನ್ನು ಹೊಂದಿದ್ಧಾರೆ. ಇದೇ ರೀತಿ ಮೈಸೂರು ಮತ್ತು ಚಿತ್ರದುರ್ಗದಲ್ಲಿಯೂ ಸಂಸ್ಕøತ ಶಾಲೆಗಳನ್ನು ತೆರೆಯುವುದರ ಮೂಲಕ ಮಕ್ಕಳು ಸಂಸ್ಕøತವನ್ನು ಕಲಿಯಲು ಸಹಕಾರಿಯಾಗಿದ್ದಾರೆ ತಂದೆ ತಾಯಿ ಇಲ್ಲದ ಬಡ ಮಕ್ಕಳಿಗೆ ತಂದೆ ತಾಯಿಯಾಗಿ ನೆರವನ್ನು ನೀಡಿದ್ದಾರೆ ಎಂದು ಶ್ರೀಗಳು ಮಾಡಿದ ಕಾರ್ಯವನ್ನು ಸ್ಮರಿಸಿದರು.

       ಉಕ್ಕಡಗಾತ್ರಿಯ ಶ್ರೀ ಹಾಲಶಂಕರ ಶ್ರೀಗಳು ಮಾತನಾಡಿ ಗುರುವಿಗೆ ವಿಧೇಯನಾಗಿದ್ದರೆ ಶುಕ್ರದಸೆ ಆವಿಧೇಯನಾಗಿದ್ದಾರೆ ದಸೆ ದಿಕ್ಕು ತಪ್ಪುತ್ತದೆ, ಯಾವುದೆ ಫಲಾಫೇಕ್ಷೆ ಇಲ್ಲದೆ ಸೇವೆಯನ್ನು ಮಾಡಿದರೆ ಮುಂದೆ ಉತ್ತಮವಾದ ಸ್ಥಾನ ಸಿಗುತ್ತದೆ ಎಂಬುದಕ್ಕೆ ಲಿಂಗೈಕ್ಯ ಶ್ರೀಗಳು ಸಾಕ್ಷಿಯಾಗಿದ್ಧಾರೆ ಅವರು ಮಾಡಿದ ಸಮಾಜ ಮುಖಿಯಾದ ವಿವಿಧ ಕಾರ್ಯಕ್ರಮಗಳು ಇಂದು ಅವರನ್ನು ಸ್ಮರಣೆ ಮಾಡುವ ಹಾಗೆ ಮಾಡಿದೆ ಎಂದರು.

       ದೇಹದಲ್ಲಿನ ಕಲ್ಮಶವನ್ನು ಹೊರ ಹಾಕಲು ಶುದ್ದವಾದ ನೀರಿನಲ್ಲಿ ಸ್ಥಾನವನ್ನು ಮಾಡಬೇಕಿದೆ ಅದೇ ಮನಸ್ಸಿನಲ್ಲಿನ ಕಲ್ಮಶ ದೂರವಾಗಲು ಈ ರೀತಿಯಾದ ಕಾರ್ಯಕ್ರಮಗಳನ್ನು ಭಾಗವಹಿಸಿ ಸ್ವಾಮಿಗಳು ಹೇಳಿದ ಮಾತುಗಳನ್ನು ಆಲಿಸಿದರೆ ಅಲ್ಲಿನ ಕಲ್ಮಶ ದೂರವಾಗುತ್ತದೆ ಎಂದು ಆಗಮಿಸಿದ ಭಕ್ತಾಧಿಗಳಿಗೆ ಕಿವಿ ಮಾತು ಹೇಳಿದರು.

      ಕಾರ್ಯಕ್ರಮದ ನೇತೃತ್ವವನ್ನು ಚಿಕ್ಕನಹಳ್ಳಿಯ ಗವಿಮಠದ ಶ್ರೀ ಸಿದ್ದಲಿಂಗಾರಾಧ್ಯ ಶ್ರೀಗಳು,ಮುಸ್ಟೂರಿನ ಓಂಕಾರೇಶ್ವರ ಮಠದ ಶ್ರೀ ರುದ್ರಮುನಿ ಶ್ರೀಗಳು, ಮತ್ತು ಉಜ್ಜಯಿನ ಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಶ್ರೀ ಅಭೀಷೇಕ ದೇವರು ವಹಿಸಿದ್ದರು. ಎಸ್.ವಿ.ಮಲ್ಲಿಕಾರ್ಜನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link