ತುರುವೇಕೆರೆ:
ದೇಶದ ರಕ್ಷಣೆ, ಸಮಗ್ರತೆ, ಸರ್ವಾಂಗೀಣ ಅಭಿವೃದ್ದಿ, ಭೃಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿ ಉತ್ತಮ ಆಡಳಿತ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಈ ದೇಶಕ್ಕೆ ಪ್ರದಾನಿಯಾಗಬೇಕು ಎಂದು ಶಾಸಕ ಮಸಾಲಾಜಯರಾಮ್ ತಿಳಿಸಿದರು.
ತುಮಕೂರು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಪರವಾಗಿ ತಾಲೂಕು ಬಿಜೆಪಿ ಪಕ್ಷದಿಂದ ಭಾನುವಾರ ಬಿಜೆಪಿ ಚುನಾಯಿತ ಫ್ರತಿನಿಧಿಗಳು, ಮುಖಂಡರುಗಳು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಪಟ್ಟಣದಲ್ಲಿ ಮತ ಪ್ರಚಾರ ನಡೆಸಿ ಮಾತನಾಡಿದರು.
ಕಳೆದ ನಾಲ್ಕುವರೆ ವರ್ಷ ಆಡಳಿತದಲ್ಲಿ ದೇಶದ ಜನಸಾಮಾನ್ಯರಿಗೆ, ಶಿಕ್ಷಣ, ಆರ್ಥಿಕ-ಬದ್ರತೆ, ಉದ್ಯೋಗವಕಾಶ, ಆರೋಗ್ಯ, ಸ್ವಾವಲಂಬನೆಯ ಬದುಕು ನೀಡುವಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಕೌಶಲ್ಯ, ಮುದ್ರಾ, ಆಯುಶ್ಮಾನ್ ಭಾರತ್, ಫಸಲ್ ಭೀಮ, ಕೃಷಿಸನ್ಮಾನ್ ಯೋಜನೆಗಳು ಈಗಾಗಲೇ ಜನತೆಯ ಮನ-ಮನೆಗಳನ್ನು ತಲುಪಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ.
ದೇಶದ ರಕ್ಷಣೆ ವಿಚಾರದಲ್ಲಿಯೂ ಫ್ರದಾನಿಯವರ ದಿಟ್ಟ ನಿಲುವು ಬಯೋತ್ಪಾದಕ ನಿಗ್ರಹ ವಿಚಾರದಲ್ಲಿ ನೆರೆ ರಾಷ್ಟ್ರ ಪಾಕಿಸ್ಥಾನ ಮುಂದೆಂದೂ ಭಾರತ ದೇಶದ ತಂಟೆಗೆ ಬಾರದಂತಾಗಿದೆ. ಇಂತಹ ಮಹಾತ್ವಾಕಂಕ್ಷಿ ಯೋಜನೆಗಳನ್ನು ಆಡಳಿತದಲ್ಲಿ ಜಾರಿಗೆ ತಂದ ಮೋದಿಯವರನ್ನು ಅಖಂಡ ಭಾರತ ಮತ್ತೊಮ್ಮೆ ಪ್ರಧಾನಿಗಳಾಗುವಂತೆ ಹರಸುತ್ತಿದೆ. ಈ ದಿಸೆಯಲ್ಲಿ ತಾಲೂಕಿನ ಮತಭಾಂದವರು ತುಮಕೂರು ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜುಗೆ ಹೆಚ್ಚಿನ ಮತ ನೀಡುವುದರೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ವಿನಂತಿಸಿದರು.
ಮತ ಪ್ರಚಾರ ರ್ಯಾಲಿಯಲ್ಲಿ ಪಕ್ಷದ ಅಧ್ಯಕ್ಷ ದುಂಡರೇಣುಕಯ್ಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಟಿ.ಟಿ.ರಾಜಶೇಖರ್, ಡಾ.ಚೌದ್ರಿನಾಗೇಶ್, ಲಚ್ಚಿಬಾಬು, ಅಮಾನಿಕೆರೆಮಂಜಣ್ಣ, ಡಿ.ಆರ್.ಬಸವರಾಜು, ಹಾವಾಳ ರಾಮೇಗೌಡ, ದಲಿತಮುಖಂಡರಾದ ವಿ.ಟಿ.ವೆಂಕಟರಾಮ್, ಚಿದಾನಂದ್, ಎಡಗೀಹಳ್ಳಿವಿಶ್ವನಾಥ್, ಪ್ರಕಾಶ್, ಸೋಮಶೇಖರ್, ಹರಿಕಾರನಹಳ್ಳಿಪ್ರಸಾದ್, ಶಿವಲಿಂಗಯ್ಯ, ಚೌಡೇನಹಳ್ಳಿಪಂಚಾಕ್ಷರಿ, ತಾವರೆಕೆರೆಆನಂದ್, ವೀರೇಂದ್ರಪಾಟೀಲ್, ಬಸವೇಶ್, ಅನಿತಾನಂಜುಂಡಯ್ಯ, ಜಯಶೀಲ, ಉಮಾ, ಯೋಗಾನಂದ್ ಸೇರಿದಂತೆ ನೂರಾರು ಕಾರ್ಯಕರ್ತರು ಪಟ್ಟಣದಾದ್ಯಂತ ಮತ ಪ್ರಚಾರ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
