ಮಸಾಲ ಜಯರಾಮ್ ಹೇಳಿಕೆಗೆ ಖಂಡನೆ

ತುರುವೇಕೆರೆ

       ಶಾಸಕ ಮಸಾಲಜಯರಾಮ್ ಬಿಜೆಪಿ ಸಭೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎಂದು ನೀಡಿದ ಹೇಳಿಕೆಯನ್ನು ಖಂಡಿಸುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚೌದ್ರಿರಂಗಪ್ಪ ತಿಳಿಸಿದರು.

       ಪಟ್ಟಣದ ಕನ್ನಡ ಭವನದ ಮುಂಭಾಗದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಶಾಸಕರು ಕಾಂಗ್ರೆಸ್ ಕಾರ್ಯಕರ್ತರನ್ನು ಗುತ್ತಿಗೆ ಪಡೆದವರಂತೆ ಬಿಜೆಪಿಗೆ ಬೆಂಬಲಿಸುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ. ಈಗಲೂ ತಾಲ್ಲೂಕಿನಲ್ಲಿ ನಿಷ್ಟಾವಂತ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ.

         ಲೋಕಸಭಾ ಚುನಾವಣೆಯಲ್ಲಿ ಆರೋಗ್ಯಕರವಾದ ಚರ್ಚೆಗಳನ್ನು ಮಾಡುವ ಮೂಲಕ ತಮಗೆ ಬಿದ್ದ ಬಿಜೆಪಿ ಮತಗಳನ್ನು ಮೊದಲು ಭದ್ರಗೊಳಿಸಿಕೊಳ್ಳಿ. ಆದನ್ನು ಬಿಟ್ಟು ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಸೆಳೆಯುವ ವ್ಯರ್ಥ ಪ್ರಯತ್ನ ಸಾಧ್ಯವಿಲ್ಲ. ಶಾಸಕರಾಗಿ ಇಂತಹ ಬಾಲಿಶ ಹೇಳಿಕೆಗಳನ್ನು ನೀಡಬೇಡಿ ಎಂದು ಸಲಹೆ ನೀಡಿದ ಅವರು, ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸುವ ಸಲುವಾಗಿ ಏಪ್ರಿಲ್ 4 ರಂದು ತಾಲ್ಲೂಕಿನ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದೆ, ಎಲ್ಲ ಕಾರ್ಯಕರ್ತರು ಆಗಮಿಸಬೇಕೆಂದು ಕೋರಿದರು.

          ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೆ ದೇವೇಗೌಡರಿಗೆ ಮತ ನೀಡಲು ತೀರ್ಮಾನ ಮಾಡಿದ್ದಾರೆ. ಶಾಸಕರು ಕಾಂಗ್ರೆಸ್ ಕಾರ್ಯಕರ್ತರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಎರಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನದಂತೆ ಜೆಡಿಎಸ್ ಅಭ್ಯರ್ಥಿಯಾದ ಹೆಚ್.ಡಿ.ದೇವೇಗೌಡರ ಪರವಾಗಿ ಏ.4 ರಂದು ಕ್ಷೇತ್ರದ ಸಿ.ಎಸ್.ಪುರ ಹೋಬಳಿಯ ಮಣಿಕುಪ್ಪೆಯಿಂದ ಮತ ಪ್ರಚಾರ ಆರಂಭಿಸಲಾಗುತ್ತಿದೆ. ಕಾಂಗ್ರೆಸ್ – ಜೆಡಿಎಸ್ ಮುಖಂಡರು ಜಂಟಿಯಾಗಿ ಪ್ರಚಾರದಲ್ಲಿ ತೊಡಗುವವರು ಎಂದು ತಿಳಿಸಿದರು.

          ಗೋಷ್ಠಿಯಲ್ಲಿ ಎಐಸಿಸಿ ಸದಸ್ಯರಾದ ಸುಬ್ರಮಣಿ ಶ್ರೀಕಂಠೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್, ಹಿಂದುಳಿದ ವರ್ಗದ ಕಾರ್ಯದರ್ಶಿ ಕಾಂತರಾಜ್‍ಅರಸ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಯಜಮಾನ್‍ಮಹೇಶ್, ಶ್ರೀನಿವಾಸ್, ದೊರೆ, ಶಿವರಾಜು, ಶಶಿಶೇಖರ್, ಶಿವರಾಜು, ಮುಖಂಡರಾದ ನಂಜುಂಡಪ್ಪ, ಸತೀಶ್, ಜೋಗಿಪಾಳ್ಯಶಿವರಾಜು, ಶೇಷೇಗೌಡ, ಜಪ್ರುಲ್ಲಾಖಾನ್, ಮಂಗಿಗುಪ್ಪೆಬಸವರಾಜು, ಕೊಳಾಲಗಂಗಾಧರ್ ಇತರರು ಇದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap