ಕುಣಿಗಲ್
ರೈತರು ಬೆಳೆದ ತೆಂಗು ಹಾಗೂ ಬಾಳೆ ಸೇರಿದಂತೆ ಇನ್ನಿತರೆ ಬೆಳೆಗಳನ್ನು ಮಾರಾಟಮಾಡಲು ಮುಂಜಾನೆಯೇ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರಿಗೆ ಉಚಿತ ಮಾಸ್ಕ್‍ಗಳನ್ನು ನೀಡಿದರೆ ಅವರು ತಮ್ಮ ಆರೋಗ್ಯದ ಬಗ್ಗೆ ಮತ್ತಷ್ಟು ಜಾಗೃತರಾಗುತ್ತಾರೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷ ಹೆಚ್.ಜೆ. ಹೇಮರಾಜು ತಿಳಿಸಿದರು.
ತಾಲ್ಲೂಕಿನಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಕೊರೋನಾ ವೈರಾಣುವನ್ನು ಅರಿತ ಅವರು ಬುಧವಾರದ ಸಂತೆಗೆ ತೆಂಗು, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ಮಾರಾಟ ಮಾಡಲು ಬರುವ ಹಲವು ರೈತರು ಮಾಸ್ಕ ಹಾಕಿಕೊಳ್ಳದೆ ಬಂದಿರುವುದನ್ನು ಗುರುತಿಸಿ ಅವರಿಗೆಲ್ಲ ಉಚಿತ ಮಾಸ್ಕ್‍ಗಳನ್ನು ನೀಡಿ ಪ್ರತಿಯೊಬ್ಬರು ಮಾಸ್ಕ್ ದರಿಸಿಯೇ ಬರಬೇಕು ಮತ್ತು ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಕಿವಿಮಾತು ಹೇಳುವ ಮೂಲಕ ನಿಮ್ಮ ಆರೋಗ್ಯವನ್ನು ನೀವೇ ಎಚ್ಚರಿಕೆಯಿಂದ ರಕ್ಷಿಸಿಕೊಳ್ಳುವಂತೆ ತಿಳಿಸಿದರು.
ಜೊತೆಗೆ ಇಂದಿನ ಸರ್ಕಾರ ಹೊಸ ಕಾಯ್ದೆಯನ್ನು ರೂಪಿಸಿದ್ದು ಎಲ್ಲಿಯಾದರೂ ಮಾರಾಟ ಮಾಡಿಕೊಳ್ಳಬಹುದೆಂದು ಹೇಳುತ್ತಿರುವುದರಿಂದ ಬಡ ರೈತಾಪಿ ಜನರಿಗೆ ಅನ್ಯಾಯವಾಗುತ್ತದೆ ಇಲ್ಲಿ ಧನಬಲ ಇದ್ದವನಿಗೆ ಲಾಭಗಳಿಸವು ಅವಕಾಶ ಹೆಚ್ಚಾಗಿದೆ ಮತ್ತು ಕಳ್ಳಸಂಗ್ರಹಣೆಗೂ ಕುಮ್ಮಕ್ಕು ನೀಡಿದಂತಾಗುತ್ತದೆ ಆದ್ದರಿಂದ ಈ ಹಿಂದೆ ಇದ್ದ ರೀತಿಯಲ್ಲಿಯೇ ಮುಂದುವರೆದರೆ ಬಡ ರೈತರಿಗೆ ಚಿಕ್ಕ ವ್ಯಾಪಾರಿಗಳಿಗೆ ನ್ಯಾಯಸಿಗಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಯಾವುದೇ ಹಣಕಾಸು ಉಳಿದಿಲ್ಲ ಮುಂಬರುವ ದಿನಗಳಲ್ಲಿ ಖುದ್ದು ವ್ಯಾಪಾರಿಗಳೇ ಬಂದು ಮುಂಗಡವಾಗಿ ಹಣ ನೀಡಿದರೆ ಅವರಿಗೆ ಬಾಡಿಗೆ ಆಧಾರದ ಮೇಲೆ ಮಳಿಗೆಗಳನ್ನು ನಿರ್ಮಿಸಿಕೊಡುವ ಮೂಲಕ ಸಮಿತಿಗೆ ಆಧಾಯ ಬರುವ ಮೂಲವನ್ನು ಕಂಡುಕೊಳ್ಳಬಹುದಾಗಿದೆ ಎಂದ ಅವರು ಕೆಲವೇ ದಿನಗಳಲ್ಲಿ ಸರ್ಕಾರದಿಂದ ಬರುವ ಅನುದಾನವನ್ನು ಪಡೆದು ಸಿಸಿರಸ್ತೆ ಮತ್ತು ಕಾಂಪೌಡ್ ನಿರ್ಮಿಸುವುದು ಮತ್ತು ಒತ್ತುವರಿ ಜಾಗವನ್ನು ತೆರವುಗಳಿಸುವ ಕಾರ್ಯವನ್ನು ಮಾಡುವ ಮೂಲಕ ಉತ್ತಮ ಸೇವೆ ಮಾಡುವುದಾಗಿ ಭರವಸೆ ನೀಡಿದ ಅವರು ಪ್ರತಿ ಬುಧವಾರ ರೈತರಿಗೆ ಉಚಿತ ಮಾಸ್ಕ್ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹೇಮಾವತಿ ಮತ್ತು ಸಿಬ್ಬಂದಿ ನಿರ್ದೇಶಕರಾದ ಮಲ್ಯಾನಾಗರಾಜ್, ವಡ್ಡರಕುಪ್ಪೆ ನಾಗರಾಜ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ