ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಅದಲಗೆರೆ ಗ್ರಾಮದ ಸರ್ವೆ ನಂಬರ್ 76/7 ರಲ್ಲಿ ವಿದ್ಯುತ್ ತಂತಿ ಒಂದಕೊಂದು ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಮುಂಜಾನೆ ಯಾರು ಇಲ್ಲದ ಸಮಯದಲ್ಲಿ ವಿದ್ಯುಂತ್ ಬಂದಾಗ ಕೇಬಲ್ ಹಾಗೂ ವಿದ್ಯುಂತ್ ತಗೂಲಿ ಸಂಪೂರ್ಣವಾಗಿ ವಿದ್ಯುಂತ್ ಅಳವಡಿಸಿದ ಕರೆಂಟ್ ರೋಮ್ ಮತ್ತು ಅದರಲ್ಲಿ ಇದ್ದ ಪ್ಲಾಸ್ವಿಕ್ ವಸ್ತುಗಳು ಹಾಗೂ ಅಡಿಕೆ ಬೇಸುವ ವಸ್ತುಗಳು ಸೇರಿ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿ ರೈತರು ಬೀದಿಪಾಲಾಗುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ಎಂ ಎನ್ ಕೋಟೆಯಲ್ಲಿ ಸುಮಾರು 20 ಟಿವಿಗಳು ಭಸ್ಮವಾಗಿ ಸಾಕಷ್ವು ಮನೆಗಳಲ್ಲಿ ಬಲ್ಪ್ ಗಳು ಸುಟ್ಟುವಾಗಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಗಳಲ್ಲಿ ಪದೇ ಪದೇ ಇದೆ ತರ ಘಟನೆಗಳು ನಡೆಯುತ್ತಲೇ ಇವೆ.ಕೆಂಪರಾಜು ಎಂಬ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿದೆ.ತಕ್ಷಣ ಸಂಬಂಧ ಪಟ್ಟ ಬೆಸ್ಕಾಂ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಕೆಂಪರಾಜು ಮಾದ್ಯಮದವರ ಮುಂದೆ ಅಳಲು ತೊಂಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ