ಮೇ 20ರಂದು ಸಾಮೂಹಿಕ ವಿವಾಹ, ಸನ್ಮಾನ

ದಾವಣಗೆರೆ:

    ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೇ 20ರಂದು ಬೆಳಗ್ಗೆ 9.30ಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹರ ಸೇವಾ ಸಂಸ್ಥೆಯಿಂದ 16ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ತಿಳಿಸಿದರು.

     ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಸಾನಿಧ್ಯವನ್ನು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ, ಶ್ರೀಮಹಾಂತ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಸಮಾಜದ ಮುಖಂಡರಾದ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರ್, ಬಿ.ಪಿ.ಪಾಟೀಲ್, ಹನಸಿ ಸಿದ್ದೇಶ್, ಮಲ್ಲಣ್ಣ ಬೊಮ್ಮಸಾಗರ್ ಭಾಗವಹಿಸಲಿದ್ದಾರೆ. ಇದೇ ವೇಳೆ ಡಾ.ವಿಕಾಸ್, ಡಾ.ಗಿರೀಶ್, ಎನ್.ಜಿ.ನಾಗನಗೌಡ್ರು, ಸವಣೂರು ರೇವಣಸಿದ್ದಪ್ಪ, ಅಂದನೂರು ಮುರುಗೇಶಪ್ಪ, ಅಂದನೂರು ಆನಂದ್, ಕೆ.ಟಿ.ಮುರುಗೇಶ್, ಸುರೇಶ್, ಬಿ.ಜಿ.ಅಜಯಕುಮಾರ್, ಕೆ.ಜಿ.ಮಹೇಂದ್ರನಾಥ್ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

      ಸಾಮೂಹಿಕ ವಿವಾಹಕ್ಕೆ ಈಗಾಗಲೇ 20 ಜೋಡಿಗಳು ಹೆಸರನ್ನು ನೋಂದಾಯಿಸಿದ್ದಾರೆ. ವಧು-ವರರಿಗೆ ಬಟ್ಟೆ, ಬಾಸಿಂಗ, ಮೈಸೂರು ಪೇಟ, ಮಾಂಗಲ್ಯ, ಕಾಲುಂಗುರಗಳನ್ನು ಉಚಿತವಾಗಿ ನೀಡಲಾಗುವುದು. ಮದುವೆಯಲ್ಲಿ ಪಾಲ್ಗೊಳ್ಳುವವರಿಗೆ ಒಂದು ದಿನ ಮುಂಚಿತವಾಗಿ ಬಂದು ತಂಗಲು ವಸತಿ ಹಾಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

     2004ರಿಂದ ಈವರೆಗೆ ಸುಮಾರು 1036 ಜೋಡಿಗಳ ವಿವಾಹ ನೆರವೇರಿಸಲಾಗಿದೆ. ಆದರ್ಶ ವಿವಾಹ ಯೋಜನೆಯಡಿ ಪ್ರತಿ ಜೋಡಿಗೆ 12 ಸಾವಿರದಂತೆ 760 ಜೋಡಿಗೆ ಒಟ್ಟು 91.20 ಲಕ್ಷ ರೂ. ಪ್ರೋತ್ಸಾಹಧನವನ್ನು ಸರ್ಕಾರದಿಂದ ಕೊಡಿಸಲಾಗಿದೆ ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಹದಡಿ ನಟರಾಜ್, ಎಂ.ದೊಡ್ಡಪ್ಪ, ಮದನ ಕರಿಬಸಪ್ಪ ಹಾಜರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap