ಬೆಂಗಳೂರು
ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಲೋಕಸಭಾ ಕ್ಷೇತ್ರಗಳ ಮೇ 23 ರಂದು ನಡೆಯಲಿರುವ ಮತ ಎಣಿಕೆಗೆ ಭರದ ಸಿದ್ಧತೆಗಳನ್ನು ನಡೆಸಲಾಗಿದೆ.
ಮತ ಎಣಿಕೆ ನಡೆಯುವ ಮೌಂಟ್ ಕಾರ್ಮೆಲ್ (ಬೆಂಗಳೂರು ಕೇಂದ್ರ), ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ (ಬೆಂಗಳೂರು ಉತ್ತರ), ಜಯನಗರದ ಎಸ್‍ಎಸ್‍ಎಂಆರ್‍ವಿ ಕಾಲೇಜು (ಬೆಂಗಳೂರು ದಕ್ಷಿಣ)ಗಳಿಗೆ ಭೇಟಿ ನೀಡಿ ಮತ ಎಣಿಕೆ ಕುರಿತಂತೆ ಭದ್ರತಾ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಸುದ್ದಿಗಾರರ ಜೊತ ಮಾತನಾಡಿದರು.
ಪ್ರತಿ ಮತ ಎಣಿಕೆ ಕೇಂದ್ರದಲ್ಲಿ 15 ಟೇಬಲ್‍ಗಳನ್ನು ಇಡಲಾಗುವುದು. ಒಬ್ಬ ಸಹಾಯಕ ಅಧಿಕಾರಿ, 4 ಮಂದಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಮತ ಎಣಿಕೆಗಾಗಿ ನಿಯೋಜಿಸಲಾಗಿರುವ ಸಿಬ್ಬಂದಿಗಳಿಗೆ 16 ಮತ್ತು 21 ರಂದು ತರಬೇತಿ ನೀಡಲಾಗುವುದು. ಮತ ಎಣಿಕೆ ದಿನವಾದ ಮೇ 23 ರಂದೇ ಅವರಿಗೆ ಯಾವ ಮತ ಎಣಿಕೆ ಕೊಠಡಿಗೆ ನಿಯೋಜಿಸಲಾಗಿದೆ ಎಂಬುದು ಗೊತ್ತಾಗಲಿದೆ ಎಂಬುದು ಅವರು ತಿಳಿಸಿದರು.
ಮತ ಎಣಿಕೆ ನಡೆಯುವಾಗ ಪ್ರತಿ ಕ್ಷಣವನ್ನು ವೀಡಿಯೋ ಮೂಲಕ ದಾಖಲಿಸಲಾಗುವುದು. ಅನುಮಾನ ಬಂದವರಿಗೆ ಈ ವೀಡಿಯೊ ರೆಕಾರ್ಡನ್ನು ನೀಡಲಾಗುವುದು ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಣಿಕೆ ಕೇಂದ್ರಕ್ಕೆ ಅಧಿಕೃತ ಪಾಸ್ ಹೊಂದಿದವರಿಗೆ ಮಾತ್ರವೇ ಪ್ರವೇಶ ನೀಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ