ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ

ಹಿರಿಯೂರು :

      ಸಾರ್ವಜನಿಕರು ಯಾರೊಬ್ಬರ ಪ್ರಭಾವ ಹಣದ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂಬುದಾಗಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ನಫೀಜಾಬೇಗಂ ಹೇಳಿದರು. ನಗರದ ರೋಟರಿ ಸಭಾಭವನದಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ರೆಡ್‍ಕ್ರಾಸ್, ರೋಟರಿ , ರೋಟ್ರಾಕ್ಟ್ , ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ತಾಲ್ಲೂಕು ಸ್ವೀಪ್ ಸಂಸ್ಥೆವತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಭಾರತ ದೇಶದ ಪ್ರಜಾಪ್ರಭುತ್ವದ ಘನತೆಗಾಗಿ ಜಾತ್ಯಾತೀತವಾದ ಪ್ರಜಾಸತ್ತಾತ್ಮಕ ಸಂಪ್ರದಾಯ ಮತ್ತು ನ್ಯಾಯ ಸಮ್ಮತದ ಶಾಂತಿಯುತವಾಗಿ 2019ರ ಚುನಾವಣೆಯ ಘನತೆಯನ್ನು ಎತ್ತಿಹಿಡಿಯುವ ಪ್ರತಿಜ್ಞಾವಿಧಿ ಕೈಗೊಳ್ಳಬೇಕು ಎಂದರು.ತಾಲ್ಲೂಕು ಪಂಚಾಯಿತಿ ಇಓ ರಾಮ್‍ಕುಮಾರ್ ಮತದಾರರ ಪ್ರತಿಜ್ಞಾವಿಧಿ ಭೋದನೆಯನ್ನು ಭಾರತ್‍ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರೆ, ವಿದ್ಯಾರ್ಥಿಗಳು ಮತದಾನ ತಿಳುವಳಿಕೆಯ ಬಿತ್ತಿಪತ್ರಗಳನ್ನು ಕೈಯಲ್ಲಿ ಹಿಡಿದು ನಗರ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿದರು.

      ಈ ಕಾರ್ಯಕ್ರಮದಲ್ಲಿ ನಗರಾಯುಕ್ತರು ಹೆಚ್.ಮಹಂತೇಶ್, ರೆಡ್‍ಕ್ರಾಸ್ ಉಪಾಧ್ಯಕ್ಷ ಬಿ.ಎಸ್. ನವಾಬ್‍ಸಾಬ್, ನಗರ ಸ್ಕೌಟ್ಸ್ ಮತ್ತು ಗೈಡ್ಸ್‍ನ ಅಧ್ಯಕ್ಷರು ಎಚ್.ಎಸ್.ಸುಂದರ್‍ರಾಜ್, ಸಹಾಯಕ ಗೈಡ್ಸ್ ಆಯುಕ್ತರು ಶಶಿಕಲಾರವಿಶಂಕರ್, ಗೈಡ್ಸ್ ಆಯುಕ್ತರು ಹೆಚ್.ಎಸ್.ಪ್ರಶಾಂತ್, ಗೈಡ್ಸ್ ತರಬೇತಿ ಆಯುಕ್ತರು ಯಶೋದಮ್ಮ, ರೋಟರಿಅಧ್ಯಕ್ಷ ಎಮ್.ಎಸ್.ರಾಘವೇಂದ್ರ, ಸಾರ್ವಜನಿಕ ಶಿಕ್ಷಣಇಲಾಖೆ ಬಿ.ಆರ್.ಸಿ.ರಾಘವೇಂದ್ರ, ವೆಂಕಟೇಶ್, ದೇವರಾಜ್, ರೆಡ್‍ಕ್ರಾಸ್‍ಸಂಸ್ಥೆಯ ಮಹಾಬಲೇಶ್ವರಶೆಟ್ಟಿ, ಎಸ್.ಜೋಗಪ್ಪ, ದೇವರಾಜ್‍ಮೂರ್ತಿ, ಪಿ.ಆರ್.ಸತೀಶ್‍ಬಾಬು ನಗರಸಭೆ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap