ಹರಿಹರ:
ನಗರದಸಭೆ ಹಾಗೂ ಚುನಾವಣೆ ಕೋಶದ ವತಿಯಿಂದ ಸೋಮವಾರ ಮತದಾರರಿಗೆ ಹಣ, ಉಡುಗೊರೆ, ಬೇಡ ಎಂದು ಹೇಳಿರಿ, ಪ್ರಜಾಪ್ರಭುತ್ವಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಮತದಾನ ಜಾಗೃತಿ ಅಭಿಯಾನ ಹಾಗೂ ಬೈಕ್ ರ್ಯಾಲಿ ಆಯೋಜಿಸ ಲಾಗಿತ್ತು.
ಮುಂಜಾನೆ 10ಗಂಟೆ ಸುಮಾರಿಗೆ ನಡೆದ ಅಭಿಯಾನ ಉದ್ದೇಶಿಸಿ ಮಾತನಾಡಿದ ಪೌರಾ ಯುಕ್ತ ಚಂದ್ರಪ್ಪ ಮತದಾರರು ಯಾವುದೇ ಲಂಚ ಮತ್ತು ಪುಸಲಾಯಿಸಿ ಮತ ಯಾಚಿಸುವವರ ವಿರುದ್ಧ ಎಚ್ಚರಿಕೆ ವಹಿಸಬೇಕು, ಉಚಿತವಾಗಿ ನೀಡುವ ಹಣ ಬೇಡ,ಉಡುಗೊರೆ ಬೇಡ,ಮದ್ಯ ಬೇಡ ಎಂದು ಪ್ರಮಾಣ ಮಾಡಿ ಪ್ರಜಾ ಪ್ರಭುತ್ವ ವನ್ನು ಗೆಲ್ಲಿಸಬೇಕೆಂದು ಮತದಾರರಿಗೆ ಮನವರಿಕೆ ಮಾಡಿರೆಂದು ಜಾಗೃತಿ ಅಭಿಯಾನದಲ್ಲಿರುವ ಸಿಬ್ಬಂದಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿ ಈ ರೀತಿಯ ಜಾಗೃತಿ ಅಭಿಯಾನಗಳನ್ನು ಎಲ್ಲಾ ಇಲಾಖೆಯ ನೌಕರರು,ಸಂಘ ಸಂಸ್ಥೆಗಳು ನಡೆಸಿದಾಗ ನಿಷ್ಪಕ್ಷವಾಗಿ ಮತದಾನ ನಡೆಯಲು ಅನುಕೂಲವಾಗುತ್ತದೆ.ಮತದಾರರು ಯಾವುದೇ ಆಸೆ,ಆಮಿಷಗಳಿಗೆ ಅಥವಾ ಬಲವಂತಕ್ಕೆ ಒಳ ಗಾಗದೆ ನಿರ್ಭಯವಾಗಿ ತಮ್ಮ ಇಚ್ಛೆಯಂತೆ ಮತ ದಾನ ಮಾಡಲು ತಿಳಿಸಿದರು.
ಈ ಸಮಯದಲ್ಲಿ ಉಪ ಚುನಾವಣಾಧಿಕಾರಿ ರಾಮಾಂಜನೇಯ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಎಸ್.ಎಸ್.ಬಿರಾದಾರ್, ಕಂದಾಯ ಅಧಿಕಾರಿ ಮಂಜುನಾಥ್,ಪರಿಸರ ಅಭಿಯಂತ ಮಹೇಶ್ ಕೋಡಬಾಳ್,ಕಿರಣ್ ಕುಮಾರ್,ಶಿವಕುಮಾರ್, ಜಗದೀಶ್, ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷ ಕರುಗಳಾದ ರವಿಪ್ರಕಾಶ್,ಕೋಡಿ ಭೀಮರಾಯ ,ಸಂತೋಷನಾಯ್ಕ,ಸಿಬ್ಬಂದಿಗಳಾದ ಬಸವರಾಜ್,ಗುತ್ಯಪ್ಪ,ಮಂಜುನಾಥ್,ಉಷಾ, ಭಾಗ್ಯಮ್ಮ ಮುಂತಾದವರು ಉಪಸ್ಥಿತರಿದ್ದರು.