ಮತದಾನದಲ್ಲಿ ಲೋಪವಾಗದಂತೆ ಜಾಗ್ರತೆ ವಹಿಸಿಲು ಪ್ರಾತ್ಯಕ್ಷತೆ …!!

ಚಳ್ಳಕೆರೆ

       ಮತದಾರರು ಪ್ರತಿ ಚುನಾವಣೆಗಳಲ್ಲೂ ಸಂವಿಧಾನ ಬದ್ದವಾಗಿ ಬಂದ ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಲೇಬೇಕಿದೆ. ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗದಂತೆ ಸರ್ಕಾರ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಮತಗಟ್ಟೆಗಳಲ್ಲಿ ಯಾವ ರೀತಿ ಮತ ಚಲಾಯಿಸಬೇಕು ಎಂಬ ಬಗ್ಗೆ ವಿವಿ ಫ್ಯಾಟ್ ಪ್ರಾತ್ಯಕ್ಷತೆಯನ್ನು ನಗರದ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲೂ ಹಮ್ಮಿಕೊಳ್ಳಲಾಗಿದೆ ಎಂದು ಸ್ವೀಫ್ ಸಮಿತಿ ನಿರ್ದೇಶಕ, ಪೌರಾಯುಕ್ತರ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.

        ಅವರು, ಶನಿವಾರ ಇಲ್ಲಿನ ಚಿತ್ರಯ್ಯನಹಟ್ಟಿಯ ಅಂಗನವಾಡಿ ಕೇಂದ್ರದಲ್ಲಿ ಮತದಾರರಿಗೆ ತಾವು ಮತ ನೀಡುವ ಕ್ರಮದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮತದಾರ ತಾನು ಇಷ್ಟಪಡುವ ಅಭ್ಯರ್ಥಿಯನ್ನು ತನ್ನದೇಯಾದ ಮತದಾನದ ಮೂಲಕ ಆಯ್ಕೆ ಮಾಡುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಪಡೆದಿದ್ದಾನೆ. ಯಾವುದೇ ಕಾರಣಕ್ಕೂ ಮತದಾನ ಮಾಡದೇ ದೂರ ಉಳಿಯುವುದು ಸರಿಯಲ್ಲ.

          ಇತ್ತೀಚಿನ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾನಕ್ಕೆ ಅವಶ್ಯವಿರುವ ಮತ ಯಂತ್ರಗಳನ್ನು ಪೂರೈಸಿದೆ. ವಿವಿ ಫ್ಯಾಟ್ ಎಂದು ಕರೆಯುವ ಈ ಮತ ಯಂತ್ರದಲ್ಲಿ ಯಾವ ರೀತಿ ಮತದಾನ ಮಾಡಬೇಕೆಂಬ ಬಗ್ಗೆ ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಇಂತಹ ಪ್ರಾತ್ಯಕ್ಷತೆಗಳಲ್ಲಿ ಭಾಗವಹಿಸಿ ಮಾಹಿತಿ ತಿಳಿಯಬೇಕಿದೆ. ಯಾವುದೇ ರೀತಿಯ ಸಂಶಯವುಂಟಾದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಯಿಂದ ಪರಿಹರಿಸಿಕೊಳ್ಳುಬಹುದಾಗಿದೆ. ವಿವಿಧ ಫ್ಯಾಟ್ ಪ್ರಾತ್ಯಕ್ಷತೆ ಮತದಾನದ ಬಗ್ಗೆ ಮತದಾರರನ್ನು ಜಾಗೃತಿಗೊಳಿಸುವ ಕಾರ್ಯವಾಗಿದೆ ಎಂದರು.

          ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್, ನರೇಂದ್ರಬಾಬು, ನಗರಸಭಾ ಸದಸ್ಯ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap