ಹುಳಿಯಾರು : ಮತದಾನ ತಪ್ಪಿಸದ ಶತಾಯುಷಿಗಳು

ಹುಳಿಯಾರು

    ಹುಳಿಯಾರಿನ ಶತಾಯುಷಿ ಟಿ.ಆರ್.ಶ್ರೀನಿವಾಸಶೆಟ್ಟಿ ಮತ್ತು ಹೋಬಳಿಯ ಯಳನಾಡುವಿನ ಶತಾಯುಷಿ ವಿಶ್ವನಾಥರಾಯರು ಲೋಕಸಭಾ ಚುನಾವಣೆಗೆ ಮತಚಲಾವಣೆ ಮಾಡುವ ಮೂಲಕ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅಪಾರ ಜ್ಞಾಪಕ ಶಕ್ತಿ, ಕಣ್ಣಿನ ದೃಷ್ಟಿಯನ್ನು ಹೊಂದಿರುವ ಇವರು ಈವರೆಗೆ ನಡೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಬೋರ್ಡ್, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಒಮ್ಮೆಯೂ ತಪ್ಪಿಸಿಕೊಳ್ಳದೆ ವೋಟು ಹಾಕಿದ್ದಾರಂತೆ.

    ಮತದಾನ ನಮಗೆ ಸಂವಿಧಾನ ನೀಡಿದ ಹಕ್ಕು. ನಾವು ತಪ್ಪದೆ ನಮಗೆ ಸೂಕ್ತ ಎನಿಸಿದ ವ್ಯಕ್ತಿಯನ್ನು ವೋಟ್ ಹಾಕುವುದರ ಮೂಲಕ ಆಯ್ಕೆ ಮಾಡಬೇಕು. ಆಗ ಉತ್ತಮ ಸರ್ಕಾರ ರಚನೆಯಾಗಲು ಸಾಧ್ಯ ಎಂದು ಹೇಳುತ್ತಾರೆ. ಅಲ್ಲದೆ ಮನೆಯಲ್ಲಿ ಮತದಾನದ ಹಕ್ಕನ್ನು ಪಡೆದ ಎಲ್ಲರನ್ನೂ ಮತಗಟ್ಟೆಗೆ ಕಳಿಸಿ, ಅವರು ವೋಟು ಹಾಕಿ ಬೆರಳಿಗೆ ಹಚ್ಚಿಸಿಕೊಂಡು ಬಂದ ಗುರುತನ್ನು ನೋಡಿ ಸಂತಸಗೊಳ್ಳುತ್ತಾರೆ. ಆದರೆ ಇಲ್ಲಿಯವರೆವಿಗೆ ಯಾರಿಗೂ ಇಂತಹವರಿಗೆ ಓಟ್ ಹಾಕಿ ಎಂದು ಮಾತ್ರ ಹೇಳಿಲ್ಲ.

      ಹಿಂದೆ ಪತ್ನಿಯೊಂದಿಗೆ ಮತಗಟ್ಟೆಗೆ ಹೋಗುತ್ತಿದ್ದ ಇವರು ಈಗ ಮಕ್ಕಳು, ಮೊಮ್ಮಕ್ಕಳೊಂದಿಗೆ ಹೋಗಿ ಮತ ಹಾಕಿ ಬರುತ್ತಿದ್ದಾರೆ. ಚುನಾವಣೆಯ ದಿನ ಎಲ್ಲರೂ ಮತದಾನ ಮಾಡಿ ನಮ್ಮ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link