ಮತಯಂತ್ರದಲ್ಲಿ ಈ ಬಾರಿ ಅಭ್ಯರ್ಥಿಗಳ ಭಾವಚಿತ್ರ

ಹುಳಿಯಾರು

    ಇದೇ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರದ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇವಿಎಂ ಪ್ರಾತ್ಯಕ್ಷಿಕೆಯ ಮಾಸ್ಟರ್ ಟ್ರೈನರ್ ನಾರಾಯಣ್ ಅವರು ತಿಳಿಸಿದರು.

    ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಮತಯಂತ್ರ ಹಾಗೂ ಮತ ಖಾತರಿ ಯಂತ್ರ ಬಳಕೆಯ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     ಇದುವರೆವಿಗೂ ಅಭ್ಯರ್ಥಿಹ ಹೆಸರು, ಅಭ್ಯರ್ಥಿಯ ಚಿಹ್ನೆ ಮತ್ತು ಸಂಖ್ಯೆ ಮಾತ್ರ ಮತಯಂತ್ರದಲ್ಲಿ ಇರುತ್ತಿತ್ತು. ಸ್ಪರ್ಧಾ ಕಣದಲ್ಲಿ ಒಂದೇ ಹೆಸರು ಹೋಲುವ ಅನೇಕ ಅಭ್ಯರ್ಥಿಗಳಿದ್ದಾಗ ಮತದಾರರಿಗೆ ಗೊಂದಲ ಮೂಡಬಾರದೆಂದು ಇದೇ ಮೊದಲ ಬಾರಿ ರಾಜ್ಯದಾದ್ಯಂತ ಲೋಕಸಭಾ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರಗಳು ಅಚ್ಚಾಗುತ್ತವೆ. ಮತದಾರರು ಅಭ್ಯರ್ಥಿಯ ಹೆಸರು ಮಾತ್ರವಲ್ಲದೆ ಪಕ್ಕದಲ್ಲಿಯೇ ಇರುವ ಅವರ ಭಾವಚಿತ್ರವನ್ನು ನೋಡಿ ತಮ್ಮ ಅಭ್ಯರ್ಥಿಯನ್ನು ಖಚಿತಪಡಿಸಿಕೊಂಡು ಗೊಂದಲವಿಲ್ಲದೆ ಮತ ಚಲಾಯಿಸಬಹುದು ಎಂದರು.

     ಅಲ್ಲದೆ ಇದೇ ಮೊದಲ ಬಾರಿಗೆ ಮತ ಖಾತ್ರಿ ಯಂತ್ರ ಬಳಸಲಾಗುತ್ತಿದೆ. ಪ್ರತಿ ಮತದಾರ ಮತ ಚಲಾವಣೆ ಮಾಡಿದ ನಂತರ ವಿವಿ ಪ್ಯಾಟ್ ಯಂತ್ರದಲ್ಲಿ ತಾನು ಮತ ಚಲಾವಣೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಬಹುದು. ಮತ ಯಂತ್ರದಲ್ಲಿ ಅಭ್ಯರ್ಥಿಯ ಮುಂದೆ ಗುಂಡಿ ಒತ್ತಿದ ನಂತರ ಪಕ್ಕದಲ್ಲೇ ಇರುವ ವಿವಿ ಪ್ಯಾಟ್‍ನಲ್ಲಿ ಅಭ್ಯರ್ಥಿ ಸಂಖ್ಯೆ ಹಾಗೂ ಚಿನ್ಹೆ ಏಳು ಸೆಕೆಂಡ್ ಕಾಲ ಪ್ರದರ್ಶನಗೊಳ್ಳುತ್ತವೆ . ವಿವಿ ಪ್ಯಾಟ್ ರಸೀದಿ ಯಂತ್ರದಲ್ಲಿಯೇ ಸಂಗ್ರಹವಾಗಲಿವೆ. ಅಗತ್ಯ ಬಿದ್ದಾಗ ಚುನಾವಣಾಧಿಕಾರಿಗಳು ರಶೀದಿಯನ್ನು ಎಣಿಕೆ ಮಾಡಬಹುದು ಎಂದು ಹೇಳಿದರು.

   ವಿವಿ ಪ್ಯಾಟ್ ಯಂತ್ರಗಳಲ್ಲಿ ಎರಡು ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಲಾಗಿದೆ. ಯಂತ್ರದಲ್ಲಿ ಬ್ಯಾಟರಿ ಕಡಿಮೆಯಾಗಿದ್ದರೆ ಬ್ಯಾಟರಿ ಬದಲಾವಣೆಗೆ ಅವಕಾಶವಿದೆ. ಆದರೆ ಪ್ರಿಂಟರ್ ಸಮಸ್ಯೆಯಾದರೆ ಹೊಸ ಯಂತ್ರ ಬಳಸಲಾಗುವುದು. ಯಂತ್ರವನ್ನು ಸಂಪೂರ್ಣವಾಗಿ ಮುದ್ರೆ ಮಾಡಲಾಗಿರುತ್ತದೆ. ತಾಂತ್ರಿಕ ಸಮಸ್ಯೆಗಳಿದ್ದರೆ ಯಂತ್ರವೇ ಪ್ರದರ್ಶಿಸುತ್ತದೆ. ಈ ಕುರಿತು ಎಂಜಿನಿಯರ್‍ಗಳು ಹಾಗೂ ತಾಂತ್ರಿಕ ಸಿಬ್ಬಂದಿ ನಿಗಾ ವಹಿಸುತ್ತಾರೆ ಎಂದು ಹೇಳಿದರು.ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಪಪಂ ಮುಖ್ಯಾಧಿಕಾರಿ ಮಂಜುನಾಥ್, ಚುನಾವಣಾ ಸಾಕ್ಷರತಾ ಕ್ಲಬ್ ಸಂಚಾಲಕರಾದ ಡಾ.ಲೋಕೇಶ್ ನಾಯ್ಕ ಉಪನ್ಯಾಸಕರಾದ ಪ್ರೊ.ಆರ್.ವಲಿ, ದೈಹಿಕ ಶಿಕ್ಷಣ ನಿರ್ದೇಶಕ ಆರ್.ಶಿವಯ್ಯ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link