ಮಾಯಕೊಂಡದ 20 ಕೆರೆಗಳಿಗೆ ನೀರು: ಸಿದ್ದೇಶ್ವರ್

ದಾವಣಗೆರೆ:

         ಮಾಯಕೊಂಡ ಹೋಬಳಿಯಲ್ಲಿ ಸಾಕಷ್ಟು ರೈತರು ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಮಾಯಕೊಂಡ ಹೋಬಳಿಯ ಸುಮಾರು 20 ಕ್ಕೂ ಹೆಚ್ಚು ಕೆರೆಗಳಿಗೆ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯ ಮೂಲಕ ನೀರು ಹರಿಯಲಿದೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.

         ಎಂದು ಮಾಯಕೊಂಡ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಈ ಭಾಗದ ರೈತರ ಸಂಕಷ್ಟಕ್ಕೆ ತೆರೆಬೀಳಲಿದೆ, ರೈತರು ಈ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗದೇ ಆಶಾಭಾವನೆಯಿಂದ ಇರುವಂತೆ ಮನವಿ ಮಾಡಿದರು, ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನವಾಗಲಿದ್ದು ಬಿ.ಜೆ.ಪಿ. ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಈ ನಿಟ್ಟಿನಲ್ಲಿ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯ ತ್ವರಿತ ಅನುಷ್ಟಾನಕ್ಕೆ ಸರ್ವ ಪ್ರಯತ್ನ ಮಾಡಲಾಗುವುದು ಎಂದರು.

        ಈಗಾಗಲೇ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಎರಡನೇ ಹಂತದಲ್ಲಿರುವ ಮಾಯಕೊಂಡ ಹೋಬಳಿಯ ಕಾಮಗಾರಿಯನ್ನು ಸಹ ಆದ್ಯತೆಯ ಮೇಲೆ ಕೈಗೆತ್ತಿಕೊಂಡು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಗಮನ ಹರಿಸುತ್ತೇನೆ ನರೇಂದ್ರ ಮೋದಿಯವರು ಈಗಾಗಲೇ ನೀರಾವರಿ ವಿಷಯಗಳಿಗಾಗಿಯೇ ಪ್ರತೇಕ ಸಚಿವಾಲಯ ತೆರೆಯುವ ಕುರಿತು ಪ್ರಸ್ಥಾಪಿಸಿದ್ದಾರೆ ಎಂದರು.

       ಏತ ನೀರಾವರಿ ಯೋಜನೆಯಂತಹ ಯೋಜನೆಗಳ ಅನುಷ್ಟಾನ ಇನ್ನು ಮುಂದೆ ಚುರುಕುಪಡೆಯಲಿವೆ ಎಂದರು. ಕೃಷಿ ಸಿಂಚಯಿನಿ ಯೋಜನೆಯ ಮೂಲಕ ಈಗಾಗಲೇ ನಮ್ಮ ಜಿಲ್ಲೆಯಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ಕೃಷಿ ಹೊಂಡ, ಚೆಕ್‍ಡ್ಯಾಮ್ ನಿರ್ಮಾಣ, ಜಿನಗುಕೆರೆಗಳನ್ನು ನಿರ್ಮಾಣ ಮಾಡಲಾಗಿದೆ, ರೈತರಿಗೆ ಸುಮಾರು 2.36 ಲಕ್ಷ ಸಾಯಿಲ್ ಹೆಲ್ತ್ ಕಾರ್ಡುಗಳನ್ನು ವಿತರಣೆ ಮಾಡಲಾಗಿದೆ, ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಣೆ ಮಾಡುವ ಕೆಲಸಕ್ಕೆ ನರೇಂದ್ರ ಮೋದಿಯವರು ಮುಂದಾಗಿದ್ದಾರೆ, ಆದರೆ, 40 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎನ್ನುವ ಮೈತ್ರಿ ಸರ್ಕಾರ ಇಲ್ಲಿಯವರೆಗೆ ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂಬುದನ್ನು ಹೇಳುತ್ತಿಲ್ಲ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ವಾರ್ಷಿಕ 6000 ಜಮಾ ಮಾಡುವ ಯೋಜನೆಗೆ ರಾಜ್ಯ ಸರ್ಕಾರ ಸಣ್ಣ ರೈತರ ಪಟ್ಟಿಯನ್ನೇ ಕೊಡುತ್ತಿಲ್ಲ, ಇದು ಮೈತ್ರಿ ಸರ್ಕಾರಕ್ಕೆ ರೈತರ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.

        ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೊಗ್ಗನೂರು ಬಳಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವತಿಯಿಂದ ವಿಶೇಷ ಚೇತನರ ಸಂಯುಕ್ತ ಪ್ರಾದೇಶಿಕ ಕೇಂದ್ರದ ವಿಸ್ತರಣಾ ಕೇಂದ್ರವನ್ನು ಸುಮಾರು 30 ಕೋಟಿ ವೆಚ್ಚದಲ್ಲಿ ತೆರೆಯಲು ಈಗಾಗಲೇ ಅನುಮೋದನೆ ಪಡೆಯಲಾಗಿದೆ, ಅದೇ ರೀತಿ ಆನಗೋಡು ಕಿರು ಪ್ರಾಣಿ ಸಂಗ್ರಹಾಲಯವನ್ನು ಸುಮಾರು 10 ಕೋಟಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲು ಈಗಾಗಲೇ ಪ್ರಸ್ಥಾವನೆ ಸಿದ್ದವಾಗಿದ್ದು ಅನುಮೋದನೆ ಹಂತದಲ್ಲಿದೆ ಎಂದರು. ಈ ಎಲ್ಲಾ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಲು ಮತ್ತೊಮ್ಮೆ ನನಗೆ ಆಶೀರ್ವದಿಸಿ ಅತ್ಯಧಿಕ ಮತಗಳಿಂದ ನನ್ನನ್ನು ಲೋಕಸಭೆಗೆ ಆರಿಸಿಕಳುಹಿಸುವಂತೆ ಮನವಿ ಮಾಡಿದರು.

       ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಂಜನೇಯ ನಗರ, ಹೊನ್ನಮರಡಿ, ಗೋಣಿವಾಡ, ಮತ್ತಿ, ಹೂವಿನಮಡು, ಕೋಡಿಹಳ್ಳಿ, ಕಾಶೀಪುರ, ಮಳಲಕೆರೆ, ಬಾಡಾ, ಅಣಬೇರು, ಮಾಯಕೊಂಡ, ನೇರ್ಲಿಗಿ, ಆನಗೋಡು, ಕಂದನಕೋವಿ, ಗುಡಾಳ್, ಹುಲಿಕಟ್ಟೆ, ಅಣಜಿ, ಐಗೂರು, ಹೊನ್ನೂರು ಗ್ರಾಮಗಳಲ್ಲಿ ಪ್ರಚಾರ ಕೈಗೊಂಡರು.

       ಪ್ರಚಾರದಲ್ಲಿ ಶಾಸಕರಾದ ಪ್ರೊಫೆಸರ್ ಎಂ.ಲಿಂಗಣ್ಣ, ಶಾಸಕರಾದ ಎಂ.ಚಂದ್ರಪ್ಪ. ಮಾಜಿ ಶಾಸಕರಾದ ಎಂ.ಬಸವರಾಜನಾಯ್ಕ, ಮುಖಂಡರಾದ ಹೆಚ್.ಆನಂದಪ್ಪ. ಹೆಚ್.ಕೆ.ಬಸವರಾಜ್, ಬಿ.ಜೆ.ಪಿ.ಪ್ರಧಾನಕಾರ್ಯದರ್ಶಿ ಸಹನಾ ರವಿ, ಹನುಮಂತನಾಯ್ಕ, ಹೂವಿನಮಡು ಹಾಲಪ್ಪ, ಮಳಲಕೆರೆ ಸದಾನಂದ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap