ಶಿರಾದಲ್ಲಿ ವಿಕಲಚೇತನ ಮಕ್ಕಳ ವೈದ್ಯಕೀಯ ಶಿಬಿರ

ಶಿರಾ:

       ಶಿರಾ ನಗರದ ಮಂಜುಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ವಿಕಲಚೇತನ ಮಕ್ಕಳ ವೈದ್ಯಕೀಯ ಶಿಬಿರವನ್ನು ಕೈಗೊಳ್ಳಲಾಗಿತ್ತು. ಶ್ರೀಮತಿ ಹಂಸವೇಣಿ ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.

        ಪೋಷಕರು ವಿಕಲಚೇತನ ಮಕ್ಕಳ ಬಗ್ಗೆ ಇರುವ ಮೂಢನಂಬಿಕೆ ತೊರೆದು ನೂತನ ತಾಂತ್ರಿಕತೆಯ ವೈದ್ಯಕೀಯ ಸೌಲಭ್ಯದತ್ತ ಗಮನಹರಿಸಬೇಕು. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿಶೇಷ ಚೇತನ ಮಕ್ಕಳಿಗೆ ಸಾಕಷ್ಠು ಅವಕಾಶ ಮತ್ತು ಸೌಲಭ್ಯ ನೀಡುತ್ತಿದೆ. ಪೋಷಕರು ಈ ಮಕ್ಕಳ ಬಗ್ಗೆ ಮೂಢನಂಬಿಕೆ ತೊರೆದು ಈ ಮಕ್ಕಳಲ್ಲಿ ಜೀವನ ಕೌಶಲ್ಯಗಳನ್ನು ರೂಡಿಸಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯ್ ಕುಮಾರ್ ಮಾತನಾಡುತ್ತ ವಿಶೇಷ ಚೇತನ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದು ಇದರ ಅಂಗವಾಗಿ ನಡೆಯುತ್ತಿರುವ ಈ ಶಿಬಿರದ ಸದುಪಯೋಗಪಡೆಸಿಕೊಳ್ಳಲು ಎಲ್ಲಾ ಪೋಷಕರಿಗೆ ಮತ್ತು ಮಕ್ಕಳಿಗೆ ತಿಳಿಸಿದರು.

         ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀಯುತ ಕುಮಾರ್ ಮಾತನಾಡುತ್ತ ಸರ್ಕಾರ ವಿಕಲಚೇತನ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡುತ್ತಿರುವ ಮೀಸಲಾತಿ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬಿಯಾಗಿ ಬದುಕಲು ತಿಳಿಸಿದರು.
ತಾಲ್ಲೂಕಿನ ಒಖ ಗಳಾದ ಶ್ರೀ ಚಿತ್ತಯ್ಯ, ಮತ್ತು ತಾಲ್ಲೂಕು ಅಂಗವಿಕಲ ಒಕ್ಕೂಟದ ತಾಲ್ಲೂಕು ಅಧ್ಯಕ್ಷರಾದ ಶ್ರೀ ಕಂಬಣ್ಣ ರವರು ಹಾಜರಿದ್ದರು, ಹುಬ್ಬಳ್ಳಿ ಮನೋವಿಕಾಸ ಸಂಸ್ಥೆಯ ತಜ್ಞವೈದ್ಯರುಗಳಾದ ಡಾ!! ಜೆ.ಕೆ. ಹಿರೇಮಠ್ ಮತ್ತು ತಂಡ ಈ ಶಿಬಿರದಲ್ಲಿ ಭಾಗವಹಿಸಿದ್ದರು.

        ತಜ್ಞವೈದ್ಯರುಗಳಾದ ಡಾ!! ಸಿದ್ದೇಶ್ ಕಿವಿ,ಮೂಗು ಮತ್ತು ಗಂಟಲು ತಜ್ಞರು, ಡಾ!! ಜವಹರ್ ಬಾಬು ಕೀಲು ಮತ್ತು ಮೂಳೆ ತಜ್ಞರು, ಡಾ!! ಅಸ್ಗರ್ ಬೇಗ್ ಕಣ್ಣಿತ ತಜ್ಞರು ಈ ಶಿಬಿರದಲ್ಲಿ ಭಾಗವಹಿಸಿದ್ದರು.

         ಬಿ.ಐ.ಇ.ಆರ್.ಟಿಗಳಾದ ತಿಪ್ಪೇಸ್ವಾಮಿ ಇ,ದೊಡ್ಡಯ್ಯ ಎ ,ಧಶರಥ ಕುಮಾರ್ ಜಿ, ಮೂಡಲಗಿರಿಯಪ್ಪ ಕೆ , ಪರಮೇಶ್ವರ್ ಬಿ.ಆರ್.ಪಿ , ಮಂಜುಶ್ರೀ ಕಾನ್ವೇಂಟ್ ಕಾರ್ಯದರ್ಶಿಗಳಾದ ಶ್ರೀ ಮಹಲಿಂಗಪ್ಪ, ಮಹದೇವಪ್ಪ, ಸಮಾಜ ಸೇವಕರಾದ ಬರಗೂರು ಶ್ರೀನಿವಾಸ್ , ಬಿ.ಇ.ಡಿ ಪ್ರಶಿಕ್ಷಣಾರ್ಥಿಗಳು ಮತ್ತು ಎಲ್ಲಾ ಇ.ಸಿ.ಇ, ಬಿ.ಆರ್.ಪಿ, ಸಿ.ಆರ್.ಪಿ ಮತ್ತು ಮಕ್ಕಳು ಪೋಷಕರು ಈ ಶಿಬಿರದಲ್ಲಿ ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap