ಬೆಂಗಳೂರು
ವ್ಯಾಪಾರ ಕ್ಷೇತ್ರದಲ್ಲಿ ಇ – ಕಾಮರ್ಸ್‍ಗೆ ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಭಾರತೀಯ ವ್ಯಾಪಾರ ಒಕ್ಕೂಟ ಕರೆ ನೀಡಿರುವ ಬಂದ್‍ಗೆ ಸಂಘ ಪರಿವಾರ ಮೂಲದ ಸ್ವದೇಶಿ ಜಾಗರಣ ಮಂಚ್ ಬೆಂಬಲ ನೀಡಿದೆ.
ಸ್ವದೇಶಿ ಮಂಚ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆಮಾಡಿದ್ದು, ಭಾರತದ ವ್ಯಾಪಾರ ಕ್ಷೇತ್ರದಲ್ಲಿ ಇ-ಕಾಮರ್ಸ್‍ಗೆ ಅವಕಾಶ ಕೊಟ್ಟಿರುವುದನ್ನು ಸ್ವದೇಶಿ ಜಾಗರಣ ಮಂಚ್ ಬಲವಾಗಿ ವಿರೋಧಿಸುತ್ತದೆ. ಇ-ಕಾಮರ್ಸ್ ಪರಿಣಾಮವಾಗಿ ಕೋಟ್ಯಂತರ ಸಂಖ್ಯೆಯಲ್ಲಿರುವ ಭಾರತೀಯ ವ್ಯಾಪಾರಿಗಳು ಬೀದಿಪಾಲಾಗಲಿದ್ದಾರೆ ಹಾಗೂ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳದ ಹಿಂಬಾಗಿಲ ಪ್ರವೇಶ ಇದಾಗಿದೆ. ಪ್ಲಿಪ್‍ಕಾರ್ಟ್ ಮತ್ತು ವಾಲ್‍ಮಾರ್ಟ್ ನಡುವಿನ ಒಪ್ಪಂದ ಕಾನೂನು ಬಾಹಿರವಾಗಿದ್ದು ಕೇಂದ್ರ ಸರ್ಕಾರ ಇದನ್ನು ರದ್ದು ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ