ಹುಳಿಯಾರು
ಹುಳಿಯಾರು ಹೋಬಳಿ ದಸೂಡಿಯ ಆರ್.ಜನಾರ್ಧನ್ ಅವರು ನಿರ್ಮಿಸಿ ಬಿಡುಗಡೆಯ ಹಂತದಲ್ಲಿರುವ ಮೀನ್ಕಣಜ ಚಿತ್ರತಂಡದಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲಾಯಿತು.
ನಿರ್ಮಾಪದ ಆರ್.ಜನಾರ್ಧನ್ ಅವರ ನೆರವೂ ಸೇರಿದಂತೆ ಹೋಬಳಿಯ ದಸೂಡಿ, ದಬ್ಬಗುಂಟೆ, ಕಲ್ಲೇನಹಳ್ಳಿ, ಹೊಯ್ಸಲಕಟ್ಟೆ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಚಲಚಿತ್ರದ ಸಹ ನಟರಾದ ಗೋಪಾಲ್ ಮಹಾರಾಜ್, ಭರತ್, ಗುರುಪ್ರಸಾದ್ ಅವರು ಸಾರ್ವಜನಿಕರಿಂದ ನಿರಾಶ್ರಿತರಿಗಾಗಿ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿದರು.
ಸಹಕಲಾವಿದ ಗೋಪಾಲ್ ಮಹಾರಾಜ್ ಅವರು ಈ ಬಗ್ಗೆ ಮಾತನಾಡಿ ಧನದಾಹಿ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ತರು ಒಮ್ಮೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರೆ ಮಕ್ಕಳು, ಮೊಮ್ಮಕ್ಕಳು, ಮರಿಮೊಕ್ಕಳಿಗಾಗಿ ಅಕ್ರಮವಾಗಿ ಹಣ, ಆಸ್ತಿ ಮಾಡುವುದಿಲ್ಲ. ಪ್ರಕೃತಿಯ ಮುಂದೆ ಎಲ್ಲರೂ, ಎಲ್ಲವೂ ಒಂದೆ ಎಂದು ಅಲ್ಲಿನ ಬಡವ, ಶ್ರೀಮಂತ, ಮೇಲ್ಜಾತಿ, ಕೆಳಜಾತಿಯ ಎಲ್ಲಾ ಮನೆ, ಹೊಲ ಕೊಚ್ಚಿ ಹೋಗಿ ಶ್ರೀಮಂತನೂ, ಬಡವನೊಂದಿಗೆ ಗಂಜಿ ಕೇಂದ್ರದಲ್ಲಿ ತುತ್ತು ಅನ್ನಕ್ಕಾಗಿ ಕೈ ಚಾಚುತ್ತಿದ್ದ ದೃಶ್ಯ ಮನಕಲಕುವಂತ್ತಿದೆ ಎಂದರು.
ಮೀನ್ಕಣದ ನಿರ್ಮಾಪಕ ಆರ್.ಜನಾರ್ಧನ್ ಅವರ ಸಲಹೆ ಮೇರೆಗೆ ನೆರೆ ಪೀಡಿತ ಪ್ರದೇಶಕ್ಕೆ ನಮ್ಮ ತಂಡ ಬೇಟಿ ನೀಡಿದ್ದು ಸರ್ಕಾರದ ಜೊತೆ ನಾಡಿನ ಜನರೂ ಸಂತ್ರಸ್ತರಿಗೆ ನೆರವು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾಡಿದ ನೂರಾರು ಕೋಟಿ ಒಡೆಯರು ಒಂದೊಂದು ಊರುಗಳನ್ನು ದತ್ತು ಪಡೆದು ಅಲ್ಲಿನ ನಿವಾಸಿಗಳಿಗೆ ದಿನಬಳಕೆ ವಸ್ತುಗಳನ್ನು ನೀಡಿ ಮೂಲ ಸೌಕರ್ಯ ಕಲ್ಪಿಸುವ ಉದಾರತೆ ತೋರಬೇಕಿದೆ. ಸಂಘಸಂಸ್ಥೆಗಳ ಪದಾಧಿಕಾರಿಗಳು ಅಲ್ಲಿಗೆ ತೆರಳಿ ಊರು ಸ್ವಚ್ಚತಾ ಕಾರ್ಯ ಮಾಡುವ ಅಗತ್ಯವಿದೆ ಎಂದು ತಿಳಿಸಿದರು.
ಕೃಷ್ಣ ನದಿಯ ಪ್ರವಾಹದಿಂದ ಮನೆ, ಮಠ, ಬೆಳೆ ಸೇರಿದಂತೆ ಗೃಹಪಯೋಗಿ ವಸ್ತುಗಳನ್ನು ಕಳೆದುಕೊಂಡಿರುವ ರಾಯಚೂರು ಜಿಲ್ಲೆ ಜಲದುರ್ಗ, ನೆರೆಗದ್ದೆ, ಅಂಚಿನಾಲ್ ಗ್ರಾಮಗಳ ಸಂತ್ರಸ್ತರಿಗೆ ಅಕ್ಕಿ, ಬೇಳೆ, ರಗ್ಗು, ಚಪಾತಿ, ರೊಟ್ಟಿ, ನೀರಿ, ಚಾಪೆ, ಟಾರ್ಪಲ್ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ