ಚಿತ್ರದುರ್ಗ:
ಮಾನ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರ ಆದೇಶದಂತೆ ಶ್ರೀಲಂಕಾ ದೇಶದಲ್ಲಿ ಇತ್ತೀಚಿಗೆ ನಡೆದ ಬಾಂಬ್‍ಸ್ಪೋಟದ ಹಿನ್ನೆಲೆಯಲ್ಲಿ ದಿನಾಂಕ.26.04.2019 ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರರವರ ಕಛೇರಿಯಲ್ಲಿ ಜಿಲ್ಲೆಯಲ್ಲಿನ ಪ್ರಮುಖ ಸ್ಥಳಗಳ ಭದ್ರತೆಯ ಕುರಿತು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಚರ್ಚ್‍ಗಳು, ದೇವಸ್ಥಾನಗಳು, ಮಸೀದಿಗಳು, ಮಾಲ್‍ಗಳು, ಹೋಟೆಲ್‍ಗಳು ಇನ್ನಿತರೆ ಜನನಿಬಿಡ ಸ್ಥಳಗಳು ಹಾಗೂ ಪ್ರಮುಖ ಸ್ಥಾವರಗಳ ಮುಖ್ಯಸ್ಥರುಗಳನ್ನು ಕರೆಯಿಸಿ ಸಭೆ ನಡೆಸಿದರು.
ಸಭೆಯಲ್ಲಿ ನೀಡಿದ ಸೂಚನೆಗಳು:ಭಾರತ ದೇಶದಲ್ಲಿ ಹಲವಾರು ಜಾತಿ ಪಂಗಡಗಳಿಂದ ಕೂಡಿರುವ ದೊಡ್ಡ ದೇಶವಾಗಿದ್ದು, ಶ್ರೀ ಲಂಕಾ ದೇಶದಲ್ಲಿ ಅದ ಘಟನೆಯು ಈ ಹಿಂದೆ ನ್ಯೂಜಿಲ್ಯಾಂಡ್ ದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕಾರಕೋಸ್ಕರವಾಗಿ ನಡೆದ ಘಟನೆಯಾಗಿರುವಂತೆ ಕಂಡು ಬಂದಿರುತ್ತದೆ. ಇಂತಹ ಭಯೋತ್ಪಾದನಾ ಚಟುವಟಿಕೆಗಳು ಯಾವುದೇ ಒಂದು ನಿರ್ದಿಷ್ಟ ಪ್ರದೇಶ / ಸ್ಥಳಕ್ಕೆ ಸೀಮಿತಗೊಳ್ಳದೇ ಇದ್ದು, ಯಾವುದೇ ಸ್ಥಳದಲ್ಲಿ ಯಾವುದೇ ವೇಳೆಯಲ್ಲಿ ಯಾವಾಗ ಬೇಕಾದರೂ ಇಂತಹ ದಾಳಿಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿರುವುದು ಕಂಡು ಬಂದಿರುತ್ತದೆ.
ಭಾರತ ದೇಶವು ಸಹ ಭಯೋತ್ಪಾದಕರ ದಾಳಿಯ ಕೇಂದ್ರಬಿಂದುವಾಗಿದ್ದು, ಇಂತಹ ಘಟನೆಗಳು ದೇಶದಲ್ಲಿ ಜರುಗುವುದಕ್ಕೆ ಯಾವುದೇ ರೀತಿಯಿಂದ ನಾವುಗಳು ಅವಕಾಶವನ್ನು ಮಾಡಿಕೊಡಬಾರದು. ಇಂತಹ ಘಟನೆಗಳು ನಮ್ಮ ಊರುಗಳಲ್ಲಿ ನಡೆಯುವುದಿಲ್ಲವೆಂತಾ ಉದಾಸೀನ ಮನೋಭಾವದಿಂದ ಇರದೇ ಇದ್ದು, ಇಂತಹ ಘಟನೆಗಳ ಕುರಿತಂತೆ ಮುಂಜಾಗ್ರತೆಯಿಂದ ಇರಲು ಕ್ರಮ ಕೈಗೊಳ್ಳತಕ್ಕದ್ದು.
ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಾದ ಚರ್ಚ್‍ಗಳು, ದೇವಸ್ಥಾನಗಳು, ಮಸೀದಿಗಳು ಇನ್ನಿತರೆ ಪ್ರಾರ್ಥನ ಸ್ಥಳಗಳಲ್ಲಿ ಹಾಗೂ ಇನ್ನಿತರೆ ಜನನಿಬಿಡ ಪ್ರದೇಶಗಳಲ್ಲಿ ಸಂಬಂಧಪಟ್ಟವರು ಕಡ್ಡಾಯವಾಗಿ ಸಿ.ಸಿ.ಕ್ಯಾಮೆರಾಗಳನ್ನು, ಮೆಟಲ್ ಡಿಟೆಕ್ಟರ್‍ಗಳನ್ನು ಹಾಗೂ ಸೆಕ್ಯೂರಿಟಿ ಸಿಬ್ಬಂದಿಯವರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳತಕ್ಕದ್ದು.
ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾರ್ವಜನಿಕರುಗಳು ತರುವ ಬ್ಯಾಗ್‍ಗಳನ್ನು ಕಡ್ಡಾಯವಾಗಿ ಹೊರಗಡೆ ಇರಿಸಲು ಸಂಬಂಧಪಟ್ಟ ಆಡಳಿತ ಮಂಡಳಿಯವರು ಕ್ರಮ ಕೈಗೊಳ್ಳತಕ್ಕದ್ದು.ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಪ್ರಮುಖ ಹಬ್ಬ ಹರಿದಿನಗಳ ಸಮಯದಲ್ಲಿ ಹಾಗೂ ಹೆಚ್ಚಿನ ಜನರು ಸೇರುವ ದಿನಗಳ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಲು ಸೂಚಿಸಲಾಯಿತು.
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ / ವ್ಯಾಟ್ಸಾಪ್ / ಟಿಟ್ವರ್ / ಇನ್‍ಸ್ಟ್ರಾಗ್ರಾಂ ಗಳಲ್ಲಿ ಬರುವ ವಿಷಯಗಳ ಬಗ್ಗೆ ಖಚಿತತೆ ಇಲ್ಲದೇ ಇದ್ದಲ್ಲಿ ಹಾಗೂ ಅಂತಹ ವಿಷಯಗಳ ಬಗ್ಗೆ ಅನುಮಾನ ಕಂಡು ಬಂದಲ್ಲಿ ಕೂಡಲೇ ಅಂತಹ ವಿಷಯಗಳ ಬೇರೆಯವರೊಂದಿಗೆ ಷೇರ್ ಮಾಡದೇ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಸಾರ್ವಜನಿಕರು ಸಹಕರಿಸತಕ್ಕದ್ದು.
ಜಿಲ್ಲೆಯಲ್ಲಿನ ಪ್ರಮುಖ ಸ್ಥಳಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳ ಬಳಿ ಅನುಮಾನಸ್ಪದ ವ್ಯಕ್ತಿಗಳು, ವಾಹನಗಳು ಇನ್ನಿತರೆ ವಸ್ತುಗಳು ಕಂಡು ಬಂದಲ್ಲಿ ಕಾಲವಿಳಂಬ ಮಾಡದಂತೆ ಹತ್ತಿರದ ಪೊಲೀಸ್ ಠಾಣೆಗಾಗಲೀ ಅಥವಾ ಪೊಲೀಸ್ ಕಂಟ್ರೋಲ್ ರೂಂಗಾಗಲೀ ತಿಳಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸತಕ್ಕದ್ದು.
ಜಿಲ್ಲೆಯಲ್ಲಿನ ಪ್ರಮುಖ ಸ್ಥಳಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳ ಬಳಿ ಪೊಲೀಸ್ ಇಲಾಖೆಯ ವತಿಯಿಂದ ನಿಯಮಿತವಾಗಿ ಗಸ್ತಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ನೇಮಿಸಿ ಸದರಿ ಸ್ಥಳಗಳ ಪರೀಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುವುದು.ಉಪವಿಭಾಗ / ವೃತ್ತ / ಠಾಣಾ ಮಟ್ಟದಲ್ಲಿ ಸಾರ್ವಜನಿಕರ ಸಭೆಗಳನ್ನು ನಡೆಸಿ ಇಂತಹ ಘಟನೆಗಳ ಬಗ್ಗೆ ಅರಿವು ಮೂಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳತಕ್ಕದ್ದು.
ಯಾವುದೇ ವ್ಯಕ್ತಿಯಿಂದ ಮಾಹಿತಿ ಬಂದ ಕೂಡಲೇ ಕಾಲವಿಳಂಬ ಮಾಡದಂತೆ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.ಜಿಲ್ಲೆಯಲ್ಲಿ ಪ್ರಮುಖವಾಗಿ ಚಳ್ಳಕೆರೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಪ್ರಮುಖ ಸ್ಥಾವರಗಳಿಗೆ ಈಗಾಗಲೇ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದ್ದು, ಮತ್ತೊಮ್ಮೆ ಪರೀಶೀಲಿಸಿ ಹೆಚ್ಚಿನ ಭದ್ರತೆಯ ಅವಶ್ಯಕತೆ ಕಂಡು ಬಂದಲ್ಲಿ ಕೂಡಲೇ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
ಸಭೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ತಿಳಿಸುತ್ತಾ, ಜಿಲ್ಲೆಯಲ್ಲಿ ಪ್ರಮುಖ ಸ್ಥಾವರಗಳಿಗೆ, ಜಲಾಶಯಗಳಿಗೆ, ಧಾರ್ಮಿಕ ಕೇಂದ್ರಗಳಿಗೆ, ಜನನಿಬಿಡ ಸ್ಥಳಗಳಿಗೆ ಅಗಿಂದಾಗ್ಗೆ ಭೇಟಿ ನೀಡಿ ಅಲ್ಲಿ ಅಳವಡಿಸಲಾಗಿರುವ ಸಿ.ಸಿ.ಕ್ಯಾಮೆರಾಗಳನ್ನು ತಪ್ಪದೇ ಪರೀಶೀಲಿಸಲು ಕ್ರಮ ಕೈಗೊಳ್ಳತಕ್ಕದ್ದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
