ಚಿತ್ರದುರ್ಗ:
ಅರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರ ಪ್ರಮುಖ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಸಂಘಟನೆಯ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರುಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಆಯುಕ್ತರಾದ ಪಂಕಜ ಕುಮಾರ್ ಪಾಂಡೆ, ಇಲಾಖಾ ನಿರ್ದೇಶಕರಾದ ಡಾ: ಪ್ರಭಾಕರ್, ಯೋಜನಾ ನಿರ್ದೇಶಕರು, ಆಶಾ ಕಾರ್ಯಕ್ರಮಾಧಿಕಾರಿಗಳಾದ ಡಾ: ರಾಜಕುಮಾರ್ ಇನ್ನಿತರ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಎರಡು ದಿನ ಸುದೀರ್ಘ ಚರ್ಚೆ ನಡೆಸಲಾಯಿತು.
ಸಂಘದ ರಾಜ್ಯಾಧ್ಯಕ್ಷರಾದ ಕೆ. ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ಡಿ ನಾಗಲಕ್ಷ್ಮಿ, ರಾಜ್ಯ ನಾಯಕರಾದ ರಮಾ ಟಿ.ಸಿ, ಹನುಮೇಶ್ ಸಭೆಯಲ್ಲಿ ಭಾಗವಹಿಸಿದ್ದರು.
ಕಳೆದ 14 ತಿಂಗಳಿಂದ ಬಾಕಿಯಿರುವ ಸೇವೆಗಳ ಪ್ರೋತ್ಸಾಹಧನವನ್ನು ಒಂದೇ ಬಾರಿಗೆ ನೀಡುವುದು, ಇದೇ ನವೆಂಬರ್ ತಿಂಗಳಿಂದ ರಾಜ್ಯದ ಮತ್ತು ಕೇಂದ್ರದ ನಾನ್ ಎಂಟಿಸಿಎಸ್ ಸೇರಿ ಪ್ರತೀ ತಿಂಗಳು ರೂ.6000 ಒಂದೇ ಬಾರಿಗೆ ಗೌರವಧನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಆಶಾ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ-ಆಶಾಗಳ ಮಾರಣಾಂತಿಕ ಕಾಯಿಲೆ ಚಿಕಿತ್ಸೆಗೆ ಮತ್ತು ಕಳೆದ 5 ವರ್ಷದಿಂದ ಜುಲೈ 2019 ಒಳಗೆ ಮರಣ ಹೊಂದಿದ ಆಶಾ ಕುಟುಂಬಕ್ಕೆ ಪರಿಹಾರ ಒದಗಿಸಲು ತೀರ್ಮಾನಿಸಲಾಯಿತು. ಇದೇ ವೇಳೆ ಆಶಾ ಕಾರ್ಯಕರ್ತೆಯರಿಗೆ ದ್ವಿ-ಚಕ್ರ ವಾಹನ ಖರೀದಿಸಲು ಸಹಾಯಧನ ನೀಡಲು ಸಚಿವರು ಒಪ್ಪಿಗೆ ನೀಡಿದರು ಪ್ರತೀ ವರ್ಷ ಆಶಾ ಕಾರ್ಯಕರ್ತೆಯರಿಗೆ 4 ಸಮವಸ್ತ್ರ (ಸೀರೆಗಳು) ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
