ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಪತ್ರಕರ್ತ ಮೇಘ ಗಂಗಾಧರ ನಾಯ್ಕ ಆಯ್ಕೆ

ಚಿತ್ರದುರ್ಗ;

        ಧಾರವಾಡದಲ್ಲಿ ಜನವರಿ 4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಚಿತ್ರದುರ್ಗ ಜಿಲ್ಲೆಯಿಂದ ಪ್ರಜಾಪ್ರಗತಿ ಹಿರಿಯ ಪ್ರಧಾನ ವರದಿಗಾರ ಹಾಗೂ ಲೇಖಕ ಮೇಘ ಗಂಗಾಧರ ನಾಯಕ್ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದ್ದಾರೆ

        ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನವರಿ 6ರಂದು ಬೆಳಿಗ್ಗೆ 9-45ಕ್ಕೆ ಸಾಹಿತಿ ಪ್ರೊ.ಬಿ.ಸುಖನ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಟಿಯಲ್ಲಿ ಸ್ವ ರಚಿತ ಕವನ ವಾಚನ ಮಾಡಲು ಮೇಘ ಗಂಗಾಧರ ನಾಯ್ಕ ಅವರನ್ನು ಜಿಲ್ಲೆಯಿಂದ ಆಯ್ಕೆ ಮಾಡಲಾಗಿದೆ.

      ಕವಿಗೋಷ್ಟಿಯಲ್ಲಿ ಖ್ಯಾತ ಕವಿ ಹೆಚ್.ದುಂಡಿರಾಜ್ ಆಶಯ ಭಾಷಣ ಮಾಡಲಿದ್ದು, ಸುಮಾರು 40ಕ್ಕೂ ಹೆಚ್ಚು ಕವಿಗಳು ಪಾಲ್ಗೊಳ್ಳುವರು.ಮೇಘ ಗಂಗಾಧರ ನಾಯಕ್ ಅವರು ಸುಮಾರು 25 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ಐದು ಕೃತಿಗಳನ್ನು ಪ್ರಕಟಿಸಿದ್ದಾರೆ. ಹನಿಗವನಗಳ ಗುಚ್ಚ, ಅಭಿವೃದ್ದಿಗೆ ತೆರೆದುಕೊಳ್ಳದ ಹಾದಿ, ಕತ್ತಲ ಬದುಕು, ಮೇಘ ಸಂದೇಶ-365, ನಲವತ್ತು ವರುಷ ನೂರು ಸವಾಲು ಅವರ ಪ್ರಕಟಿತ ಕೃತಿಗಳಾಗಿವೆ ಎಂದು ಅವರು ತಿಳಿಸಿದ್ದಾರೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles