ಹರಪನಹಳ್ಳಿ
ಪಟ್ಟಣದಲ್ಲಿ ಎಂ.ಪಿ.ರವೀಂದ್ರ ಯುವಶಕ್ತಿ ಪಡೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಹಿಸುತ್ತಿದೆ ಎಂದು ಯುವಪಡೆ ಅಧ್ಯಕ್ಷ ಉದಯಶಂಕರ ಹೇಳಿದರು.
ಪಟ್ಟಣದ ಚಿತ್ತಾರಗೇರಿಯ 11ನೇ ವಾರ್ಡ್‍ನಲ್ಲಿ ಶನಿವಾರ ಎಂ.ಪಿ.ರವೀಂದ್ರ ಯುವಶಕ್ತಿ ಪಡೆಯ ಸದಸ್ಯರ ನೊಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಅವರ ಹಲವಾರು ಕನಸುಗಳನ್ನು ನನಸು ಮಾಡಲು ಯುವಶಕ್ತಿ ಪಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಹಡಗಲಿ ತಾಲ್ಲೂಕಿನಲ್ಲಿ ನಡೆದ ಉರಸು ಕುಸ್ತಿ ಪಂದ್ಯಾವಳಿಯಲ್ಲಿ ವಿಜಯ ಸಾದಿಸಿದ ಯುವಕ ದಾದು ಅವರನ್ನು ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಸನ್ಮಾಸಿ ಗೌರವಿಸಿದರು.
ಪುರಸಭೆ ಮಾಜಿ ಸದಸ್ಯರಾದ ಕವಿತಾ, ಅರುಣ ಪೂಜಾರ, ಕಾಂಗ್ರೆಸ್ ಮುಖಂಡರಾದ ಎಂ.ವಿ.ಅಂಜೀನಪ್ಪ, ಡಾ.ಹರ್ಷ ಕಟ್ಟಿ, ಜಾಕೀರ್ ಹುಸೇನ್, ಗೋಲ್ಡನ್ ಬೀಡಿ ಜಾವೀದ್, ಬಸವರಾಜ, ನಟರಾಜ ಬೂಸದ್, ಚಿತ್ತಾರಗೇರಿ ಸಮಾಜದ ಮುಖಂಡರಾದ ಅಲ್ಲಾಬಕ್ಷ್, ಕೆ.ಅಬ್ದುಲ್, ರಿಯಾಜ್, ಜಮೀರ್, ಬುಡೇನಸಾಬ್ ಹಾಗೂ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
