ಸಾಹಿತ್ಯೋತ್ಸವದಲ್ಲೂ #MeToo ಸದ್ದು

ಬೆಂಗಳೂರು: 
              ದೇಶದ ಮೂಲೆ ಮೂಲೆಯಲ್ಲೂ ಮಿಟೂವಿನದ್ದೇ ವಿಚಾರ ಮೊಳಗುತ್ತಿದೆ ಈಗ ಅದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವಕ್ಕೂ ಲಗ್ಗೆ ಇಟ್ಟಿದೆ . ಅದರಲ್ಲೂ ಕೂಡ ಮಿಟೂ ಬಗ್ಗೆ ಚರ್ಚೆ, ಮಾತುಕತೆ ನಡೆದಿದೆ.ಚರ್ಚೆಯ ತಂಡದಲ್ಲಿ ಭಾರತದಲ್ಲಿ ಮಿಟೂ ಚಳವಳಿ ಆರಂಭಿಸಿದ ಸಂಧ್ಯಾ ಮೆನನ್ ಇದ್ದರು.
              ಇಷ್ಟು ವರ್ಷಗಳಲ್ಲಿ ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಯುವತಿಯರು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.1990ರ ದಶಕದಲ್ಲಿ ತಮ್ಮ ಮೇಲೆ ಬಾಲಿವುಡ್ ನಟ ಅಲೋಕ್ ನಾಥ್ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿರುವ ಬರಹಗಾರ್ತಿ ಹಾಗೂ ನಿರ್ಮಾಪಕಿ ವಿಂತಾ ನಂದಾ.
             ತಾವು ದಶಕಗಳ ಹಿಂದೆ ಅನುಭವಿಸಿದ ಲೈಂಗಿಕ ಕಿರುಕುಳದ ನೋವನ್ನು ತೋಡಿಕೊಂಡಿದ್ದೆ. ಇಷ್ಟು ವರ್ಷಗಳ ಕಾಲ ಅದನ್ನು ಮೌನವಾಗಿ,ಹೊರಗೆ ತೋರಿಸಿಕೊಳ್ಳದೆ ಎದುರಿಸಿಕೊಂಡು ಬಂದೆ ಎಂದಿದ್ದಾರೆ. ಲೈಂಗಿಕ ಅತ್ಯಾಚಾರ ನಡೆದ ಮೇಲೆ ಕೂಡ ಟಿವಿ ಧಾರವಾಹಿಗಳಿಗೆ ಅಲೋಕ್ ನಾಥ್ ಅವರ ಜೊತೆ ಕೆಲಸ ಮಾಡಿದ್ದೇನೆ.
             ನಾನು ನಿರ್ದೇಶಕಿಯಾದರೂ ನನ್ನ ಜೊತೆ ಅವರು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ನನಗೆ ತುಂಬಾ ಕಷ್ಟವಾಗುತ್ತಿತ್ತು ಎಂದಿದ್ದಾರೆ. ಅಲೋಕ್ ನಾಥ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ.ಅವರ ಪತ್ನಿ ನಂದಾ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ