ಮೆಟ್ರೋದಿಂದ ಐಪಿಎಲ್ ಪ್ರಿಯರಿಗೆ ಸಿಹಿ ಸುದ್ದಿ..!!

ಬೆಂಗಳೂರು

       ಮಾ.28 ಸೇರಿದಂತೆ ನಿಗದಿತ ದಿನಗಳಂದು ನಡೆಯಲಿರುವ ಐಪಿಎಲ್‌ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ತಡರಾತ್ರಿ 12.30ರಿಂದ 1ರವರೆಗೆ ವಿಸ್ತರಣೆ ಮಾಡಿರುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

       ಐಪಿಎಲ್‌ ಪಂದ್ಯಾವಳಿ ನಡೆಯಲಿರುವ ಮಾ.28, ಏ.5, ಏ.21, ಏ.24 ಮತ್ತು ಮೇ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮೈಸೂರು ರಸ್ತೆ, ನಾಗಸಂದ್ರ ಹಾಗೂ ಯಲಚೇನಹಳ್ಳಿ ಮೆಟ್ರೋ ನಿಲ್ದಾಣಗಳಿಂದ ಕ್ರಮವಾಗಿ ವಾಣಿಜ್ಯ ಸಂಚಾರ ಸೇವೆಯನ್ನು ತಡರಾತ್ರಿ 12.30ರವರೆಗೆ ವಿಸ್ತರಿಸಿದೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಕೊನೆಯ ವಾಣಿಜ್ಯ ಸಂಚಾರವು ತಡರಾತ್ರಿ 1ರವರೆಗೆ ಹಸಿರು ಮತ್ತು ನೇರಳೆ ಮಾರ್ಗದ ನಾಲ್ಕು ದಿಕ್ಕುಗಳಿಗೆ ಲಭ್ಯವಿರಲಿದೆ.

 ಟಿಕೆಟ್‌ ವ್ಯವಸ್ಥೆ:

      ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣವನ್ನು ತಲುಪಲು ಮತ್ತು ಹಿಂತಿರುಗಲು 50 ರೂ ನೀಡಿ ಪ್ರಯಾಣದ ಕಾಗದದ ಟಿಕೆಟುಗಳನ್ನು ಖರೀದಿಸಬಹುದು. ಐಪಿಎಲ್‌ ಪಂದ್ಯಾವಳಿ ನಡೆಯುವ ದಿನದಂದು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಕಾಗದದ ಟಿಕೆಟು ಲಭ್ಯವಿರುತ್ತದೆ. ಪಂದ್ಯಾವಳಿ ನಂತರ ರಾತ್ರಿ 10ರಿಂದ ವಿಸ್ತರಿಸಲಾದ ಕಾಲಾವಧಿಯವರೆಗೆ ಯಾವುದೇ ಮೆಟ್ರೋ ನಿಲ್ದಾಣಗಳಿಗೆ ಹಿಂದಿರುಗಲು ಈ ಕಾಗದ ಟಿಕೆಟ್‌ಗಳನ್ನು ಬಳಸಬಹುದು. ಪಂದ್ಯಾವಳಿ ಇರುವ ದಿನಗಳಲ್ಲಿ ಟೋಕನ್‌ಗಳನ್ನು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 10ರ ನಂತರ ಮಾರಾಟ ಮಾಡುವುದಿಲ್ಲ ಎಂದು ಮೆಟ್ರೋ ನಿಗಮ ತಿಳಿಸಿದೆ.

       ಏ.7ರಂದು ಸಂಜೆ ನಡೆಯಲಿರುವ ಐಪಿಎಲ್‌ ಪಂದ್ಯಾವಳಿಗೆ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಎಲ್ಲಾ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕಾಗದದ ಟಿಕೆಟ್‌ಗಳು ಖರೀದಿಗೆ ಲಭ್ಯವಿಇರುತ್ತವೆ. ಕಬ್ಬನ್‌ಪಾಕ್‌ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 7ರ ನಂತರ ಅದೇ ಕಾಗದದ ಟಿಕೆಟ್‌ ಅನ್ನು ಉಪಯೋಗಿಸಬಹುದು. ಈ ದಿನದಂದು ಸಂಜೆ 7ರ ಬಳಿಕ ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಟೋಕನ್‌ಗಳ ವಿತರಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap