ಮೇವಿಗೆ ಆಗ್ರಹಿಸಿ ರೈತರ ಪ್ರತಿಭಟನೆ

ಮಧುಗಿರಿ:

      ಗ್ರಾಮದ ಜಾನುವಾರುಗಳಿಗೆ ಮೇವು ಹಾಗೂ ನೀರು ಒದಗಿಸಲು ಅಧಿಕಾರಿಗಳು ಅಸಹಾಯಕರಾಗಿದ್ದಾರೆಂದು ಆರೋಪಿಸಿ ಬಸವನಹಳ್ಳಿ ಗ್ರಾಮದ ರೈತರು ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಛೇರಿಯ ಮುಂದೆ ಜಾನುವಾರಗಳನ್ನು ಕರೆತಂದು ಕೆಲಹೊತ್ತು ಪ್ರತಿಭಟಿಸಿದರು.

      ತಾಲ್ಲೂಕಿನ ಕಸಬ ಹೋಬಳಿಯ ಬಸವನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಮೇವು ಬದಗಿಸಿಕೊಡುತ್ತೆವೆಂದು ಕಳೆದ ಎರಡು ತಿಂಗಳಿನಿಂದ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮೇವಿಲ್ಲದೆ ಜಾನುವಾರುಗಳು ಸಾವು ನೋವು ಅನುಭವಿಸುತ್ತಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಅಧಿಕಾರಿಗಳು ಮೇವು ಮತ್ತು ನೀರನ್ನು ಒದಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

      ಗ್ರಾಮಸ್ಥ ಶಿವಲಿಂಗಪ್ಪ ಮಾತನಾಡಿ ಈಗಾಗಲೇ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಸರ್ಕಾರಿ ಕೊಳವೆ ಬಾವಿಯೊಂದನ್ನು ಕೊರೆಸಿದ್ದು ಬೋರ್ ವೆಲ್ ನಲ್ಲಿ ನೀರು ಸಹ ದೊರೆಕಿದೆ ಆದರೆ ಇದೂವರೆವಿಗೂ ಬೋರ್ ವೆಲ್‍ಗೆ ಪಂಪ್ ಮೋಟಾರ್ ಆಳವಡಿಸದೆ ಕೆಲ ಅಧಿಕಾರಿಗಳು ಖಾಸಗಿಯವರ ಜೊತೆ ಶಾಮೀಲಾಗಿ ನೀರಿನ ವಿಚಾರದಲ್ಲಿ 15 ಸಾವಿರ ಹಣ ಬಾಡಿಗೆ ನೀಡುತ್ತಾ ಸರಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ.

     ಇನ್ನೂ ದನಕರುಗಳಿಗೆ ಮೇವನ್ನು ಒದಗಿಸದೆ ಇವತ್ತು ನಾಳೆ ಎಂದು ಸಬೂಬು ಹೇಳುತ್ತಾ ಬಂದಿದ್ದಾರೆ. ಕಳೆದ ಲೋಕ ಸಭೆಯ ಚುನಾವಣೆ ವೇಳೆಯಲ್ಲಿ ಮೇವು ನೀರು ಒದಗಿಸಿಕೊಡುತ್ತೇವೆಂದು ಹೇಳಿ ಹೋದ ಶಾಸಕರು ಇದೂವರೆವಿಗೂ ನಮ್ಮ ಸಮಸ್ಯೆಯನ್ನು ಬಗೆಹರಿಸಿಲ್ಲ ಗ್ರಾಮಕ್ಕೂ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

     ರೈತ ಮಹಿಳೆ ರತ್ನಮ್ಮ ಮಾತನಾಡಿ ಗ್ರಾಮದಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಹೆಚ್ಚಿದೆ ನಮಗೆ ಕೂಲಿ ಹಾಗೂ ದನಗಳಿಗೆ ಮೇವು ದೊರೆಯುತ್ತಿಲ್ಲ ಬೆ.7 ರಿಂದ ಮಧ್ಯಾಹ್ನ 3ರ ವರೆವಿಗೂ ತೋಟಗಳನ್ನು ಹುಡುಕಾಡಿದರು ಮೇವು ದೊರೆಯುತ್ತಿಲ್ಲ ಕೆಲ ತೋಟಗಳಲ್ಲಿನ ಮಾಲೀಕರು ನಮಗೆ ಹುಲ್ಲು ತೆಗೆಯಲು ಬಿಡುತ್ತಿಲ್ಲಾ ಸರಕಾರದಿಂದ ಇದೂವರೆವಿಗೂ ಒಂದು ಬಾರಿಯು ಸಹ ಮೇವು ದೊರೆತ್ತಿಲ್ಲಾ ನನಗೆ ದನ ಕರುಗಳನ್ನು ಸುಧಾರಿಸಲು ಆಗುತ್ತಿಲ್ಲಾ ಇವುಗಳನ್ನು ಕಟುಕರಿಗೂ ಮಾರೋಣಾ ವೆಂದರೆ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂದು ತನ್ನ ಆಳಲು ತೋಡಿಕೊಂಡರು.

     ತಹಶೀಲ್ದಾರ್ ರಮೇಶ್ ಬಾಬು ಮನವಿ ಪತ್ರ ಸ್ವೀಕರಿಸಿ ಮಾತನಾಡಿ ನಾಳೆ ಬೆಳಗ್ಗೆ 12 ಗಂಟೆಯೊಳಗೆ ಮೇವು ವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದಲ್ಲಿನ ಬೋರ್ ವೆಲ್‍ನ ಬಗ್ಗೆ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಆದಷ್ಟೂ ಬೇಗಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದಾಗ ಗ್ರಾಮದ ರೈತರು ಪ್ರತಿಭಟನೆಯನ್ನು ಕೈ ಬಿಟ್ಟರು.

       ಬಿ.ಹೆಚ್. ಮಂಜು, ಸಣ್ಣ ಮಲ್ಲಯ್ಯ, ರಂಗನಾಥ, ನಾಗರಾಜು, ಎಂ.ನಾಗಭೂಷಣ, ಮಲ್ಲಯ್ಯ, ಶಿವಕುಮಾರ್,ದೊಡ್ಡಮಲ್ಲಯ್ಯ, ಪಾಪಯ್ಯ, ಕಮಲಮ್ಮ, ನಾಗಮ್ಮ, ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap