ಗುಬ್ಬಿ
ತಾಲ್ಲೂಕಿನಲ್ಲಿ ಕೊರೋನಾ ತೀವೃಗೊಳ್ಳುತ್ತಿದ್ದು ಪಟ್ಟಣದ ಎಂ.ಜಿ ರಸ್ತೆಯಲ್ಲಿರುವ ಎಸ್.ಬಿ.ಐ ಭ್ಯಾಂಕ್‍ನ 4 ಸಿಬ್ಬಂದಿಗಳಿಗೆ ಕೊರೋನಾ ದೃಢವಾಗಿದ್ದು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೊರೋನಾ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಎಸ್.ಬಿ.ಐ ಭ್ಯಾಂಕ್‍ನ್ನು ಸೀಲ್ಡ್ ಡೌನ್ ಮಾಡಲಾಗಿದ್ದು ಎಂ.ಜಿ.ರಸ್ತೆಯನ್ನು ಸೀಲ್ಡ್ ಡೌನ್ ಮಾಡಲಾಗಿದೆ.
ತಾಲ್ಲೂಕಿನ ಹಲವು ಗ್ರಾಮೀಣ ಭಾಗಗಳಲ್ಲಿಯೂ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ತಾಲ್ಲೂಕು ಅಢಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಕೊರೋನಾ ದೃಢವಾಗಿರುವ ಪ್ರದೇಶಗಳನ್ನು ಸೀಲ್ಡ್ ಡೌನ್ ಮಾಡಲಾಗಿದೆ ಎಂದು ತಹಸಿಲ್ದಾರ್ ಡಾ:ಪ್ರದೀಪ್‍ಕುಮಾರ್ ಹಿರೇಮಠ್ ತಿಳಿಸಿದ ಅವರು ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಕೌರಂಟೈನ್ ಮಾಡಲಾಗಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನಾಧ್ಯಂತ ಜನಸಾಮಾನ್ಯರಿಗೆ ಅಗತ್ಯ ಮುಂಜಾಗ್ರತೆಯಿಂದಿರುವಂತೆ ಸೂಚಿಸಲಾಗಿದೆ ಅಲ್ಲದೆ ಅನಗತ್ಯವಾಗಿ ಓಡಾಡುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲಾಗುತ್ತಿದೆ ಎಂದು ತಿಳಿಸಿದರು.ಜು.2 ರಂದು ತಾಲ್ಲೂಕಿನಲ್ಲಿ 13 ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಢಳಿತದವತಿಯಿಂದ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು ಅಗತ್ಯ ಎಚ್ಚರಿಕೆಯಿಂದಿರುವಂತೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
