ದಾವಣಗೆರೆ:
ಬಿಸಿಯೂಟ ತಯಾರಕರ ಫ್ರತಿಭಟನೆಗೆ ಮಣಿದು, ರಾಜ್ಯ ಸರ್ಕಾರ ಬಿಸಿಯೂಟ ಪೂರೈಕೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಬಿಸಿಯೂಟ ತಯಾರಕರು ಅಂತ್ಯಗೊಳಿಸಿದ್ದಾರೆ.
ರಾಜ್ಯದಲ್ಲಿ ಕಳೆದ 16 ವರ್ಷಗಳಿಂದ ಬಿಸಿಯೂಟ ಯೋಜನೆಯಡಿ 1.18 ಲಕ್ಷ ಮಹಿಳೆಯರು ತಿಂಗಳಿಗೆ 2,700 ರೂ. ಗೌರವ ಧನ ಪಡೆದು ಬಿಸಿಯೂಟ ತಯಾರಿಸುತ್ತಿದ್ದರು. ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ತಯಾರಿಸುವ ಜವಾಬ್ದಾರಿಯನ್ನು ನೀಡಲು ಸರ್ಕಾರ ಮುಂದಾಗಿದ್ದರಿಂದ ಬಿಸಿಯೂಟ ತಯಾರಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗುವು ಆತಂಕದಲ್ಲಿದ್ದರು. ಆದ್ದರಿಂದ ತಕ್ಷಣವೇ ಸರ್ಕಾರ ಬಿಸಿಯೂಟ ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂಬುವುದು ಸೇರದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಮಾ.8ರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅನಿರ್ಧಿಷ್ಠಾರ್ವಧಿ ಹೋರಾಟ ಆರಂಭಿಸಿದ್ದರು.
ಆದ್ದರಿಂದ ಬಿಸಿಯೂಟ ತಯಾರಕರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಪೂರೈಕೆ ಮಾಡುವ ನಿರ್ಧಾರದಿಂದ ಹಿಂದೆ ಸರಿದಿರುವುದಲ್ಲದೇ, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‍ನ ಮುಖಂಡರ ಜೊತೆಗೆ ಸಭೆ ನಡೆಸಿದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಾಲಿ ಇರುವ ಬಿಸಿಯೂಟ ತಯಾರಕರನ್ನು ಮುಂದುವರಿಸುಲಾಗುವುದು ಹಾಗೂ ವೇತನ ಹೆಚ್ಚಿಸುವ ಬೇಡಿಕೆಗಳ ಬಗ್ಗೆ ಜೂನ್ ತಿಂಗಳಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಫೆಡರೇಷನ್‍ನ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಎ.ಐ.ಟಿ.ಯು.ಸಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ಗಿರೀಶ್, ಜಿ.ಡಿ.ಪುಜಾರ್, ಶೈಲಜಾ, ಚಂದ್ರಮ್ಮ, ವನಜಾಕ್ಷಿ, ನಿರ್ಮಲ, ಲಲಿತಬುಶೆಟ್ಟಿ, ಜ್ಯೋತಿಲಕ್ಷ್ಮೀ ಮತ್ತಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.