ಮಿಡಿಗೇಶಿಯ ವ್ಯಕ್ತಿಗೆ ಸೋಂಕು

ಮಿಡಿಗೇಶಿ

     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಬಸ್ ನಿಲ್ದಾಣದ ಬಳಿಯ ಚಿಲ್ಲರೆ ದಿನಸಿ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಿಂದ ಜು.27 ರಂದು ಸಾಯಂಕಾಲ ಸದರಿ ರೋಗಿಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸೇರಿ ಅಂಬುಲೆನ್ಸಿನಲ್ಲಿ ಮಧುಗಿರಿ ಪಟ್ಟಣದ ಕೋವಿಡ್ -19 ಕೊರೊನಾ ಆಸ್ಪತ್ರೆಗೆ ದಾಖಲಿಸಿದರು.

     ಇದರಿಂದ ಗ್ರಾಮಾಂತರದಲ್ಲೂ ಮಹಾಮಾರಿ ಕೊರೊನಾ ಕಾಯಿಲೆಗೆ ಭಯಭೀತರಾಗಿದ್ದಾರೆ. ಇಲ್ಲಿನ ಒಂದು ವೈನ್ಸ್‍ಸ್ಟೋರ್, ಎರಡು ಚಿಲ್ಲರೆ ಅಂಗಡಿ, ಒಂದು ಹೋಟೆಲ್, ಒಂದು ಬೇಕರಿಯನ್ನು ಸೀಲ್‍ಡಾನ್ ಮಾಡಿರುತ್ತಾರೆ ಇನ್ನುಳಿದ ಅಂಗಡಿ ಹೋಟೆಲ್‍ಗಳನ್ನು ಬಂದ್ ಮಾಡಲಾಗಿರುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ