ವಿದ್ಯುತ್ ಕಂಬಕ್ಕೆ ಹಾಲಿನ ವಾಹನ ಡಿಕ್ಕಿ..!

ಮಿಡಿಗೇಶಿ

     ಕೃಷ್ಣಾಪುರ ಸಮೀಪ ಸೆ. 29 ರಂದು ಬೆಳಗ್ಗೆ 11-50 ರಲ್ಲಿ ಪಾವಗಡ ಕಡೆಯಿಂದ ಮಧುಗಿರಿ ಕಡೆಗೆ ಬರುತ್ತಿದ್ದ ನಂದಿನಿ ಹಾಲು ಸರಬರಾಜು ವಾಹನವು ಚಾಲಕನ ನಿಂತ್ರಣ ತಪ್ಪಿ, ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು, ಕಂಬಕ್ಕೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಗಳು ವ್ಯಾನಿನ ಮೇಲ್ಭಾಗದ ಕ್ಯಾಬಿನ್‍ಗೆ ಸಿಕ್ಕಿಕೊಂಡಿವೆ. ಆದರೆ ಅದೃಷ್ಟವಶಾತ್ ಅವಘಡ ಸಂಭವಿಸಿದಾಗ ವಿದ್ಯುತ್ ಸರಬರಾಜು ಇರಲಿಲ್ಲ. ಹಾಗಾಗಿ ವ್ಯಾನಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಾಹನದ ಮುಂಭಾಗದ ಗಾಜುಗಳು ಪುಡಿಪುಡಿಯಾಗಿದ್ದು, ವಾಹನವೂ ಕೂಡ ಜಖಂಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link