1ನೇ ವಾರ್ಡ್‍ನಲ್ಲಿ ಕಿರುನೀರು ಘಟಕ ಉದ್ಘಾಟನೆ

ಚಿತ್ರದುರ್ಗ

    ಹನಿ ನೀರಿಗೆ ದಾಹ ಉಂಟಾಗಿದೆ ನೀರಿನ ಸಂರಕ್ಷಣೆ ಮಾಡಿಕೊಂಡು ಮಿತವಾಗಿ ಬಳಸುವ ಜವಾಬ್ದಾರಿ ನಾಗರೀಕರು ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ ಮಾಡಿದರು.

    ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ನಗರಸಭೆ 1 ನೇ ವಾರ್ಡ್ ವ್ಯಾಪ್ತಿಯಲ್ಲಿ ಕಿರು ನೀರು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ತೀವ್ರ ಬರಗಾಲ ಎದುರಿಸುತ್ತಿದ್ದು ಜಿಲ್ಲೆಯಲ್ಲಿ ಸಹ ಮಳೆ ಕೈ ಕೊಟ್ಟಿದೆ. ಕೇಲವು ಕಡೆಗಳಲ್ಲಿ ಮಾತ್ರ ಕಳೆದ ಎರಡು ದಿನಗಳ ಹಿಂದೆ ಉತ್ತಮ ಮಳೆಯಾಗಿದೆ.

     ಆದರೆ ಆರೇಳು ವರ್ಷಗಳಿಂದ ಮಳೆ ಇಲ್ಲದೆ ಇದ್ದ ಭೂಮಿಗೆ ನೀರು ಬಂದಿದ್ದು ಒಂದು ಹನಿ ನೀರು ಕಾಣದಂತೆ ಕುಡಿದಿದೆ. ಅದಕ್ಕಾಗಿ ಸಂತೃಪ್ತಿ ಮಳೆ ಬರುವವರೆಗೂ ಎಚ್ಚರಿಕೆಯಿಂದ ನೀರನ್ನು ಬಳಸಬೇಕು. ನೂತನ ಟ್ಯಾಂಕ್ ಗಳನ್ನು ನಗರದಲ್ಲಿ ಮಾಡುತ್ತಿದ್ದು ಇದರಿಂದ ನೀರು ಪೋಲಾಗುವುದು ತಡೆಯಬಹುದು ಮತ್ತು ನೀರಿನ ಶೇಕರಣೆಗೆ ಅನುಕೂಲ ಎಂದರು. ಅದಕ್ಕಾಗಿ ಸಾರ್ವಜನಕರು ಇದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ನಗರಸಭೆ ಸದಸ್ಯೆ ನಾಗಮ್ಮ , ಮಾಜಿ ನಗರ ಸಭೆ ಸದಸ್ಯ ಮಹೇಶ್ ,ಸದಸ್ಯ ಶ್ರೀನಿವಾಸ್‍ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap